Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಕಾರ್ಯಕ್ರಮದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮಳಿಗೆಯನ್ನು ನ. 15 ರಂದು ಧರ್ಮಸ್ಥಳದ ಪ್ರೌಢಶಾಲಾ ಆವರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಘಂಟೆ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಲಕ್ಷದೀಪೋತ್ಸವ ಎಲ್ಲರ ಮನೆ, ಮನಗಳನ್ನು ಬೆಳಗಿಸುವ ಪವಿತ್ರ ಸಮಾರಂಭ ಎಂದರು.

ವಸ್ತು ಪ್ರದರ್ಶನದಲ್ಲಿ 296ಕ್ಕೂ ಹೆಚ್ಚು ಮಳಿಗೆಗಳಿದ್ದು, ಅಪೂರ್ವ ಮಾಹಿತಿ, ಮಾರ್ಗದರ್ಶನದ ಕಣಜವಾಗಿದೆ. ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಮಳಿಗೆಗಳ ವಿವರ: ಬ್ಯಾಂಕುಗಳು, ಸರಕಾರಿ ಮಳಿಗೆಗಳು, ಧಾರ್ಮಿಕ ಮಳಿಗೆಗಳು, ಜೀವ ವಿಮೆ, ಅಂಚೆ ಇಲಾಖೆ, ಪುಸ್ತಕ ಮಳಿಗೆಗಳು, ವಾಹನ ಮಳಿಗೆ, ಕೃಷಿ ಉಪಕರಣ, ರುಡ್‌ಸೆಟ್ ಬಜಾರ್. ಶಿಕ್ಷಣ ಸಂಸ್ಥೆ, ಧರ್ಮೋತ್ಥಾನ ಟ್ರಸ್ಟ್, ಕೃಷಿ ಉತ್ಪನ್ನಗಳು, ಮಂಜುವಾಣಿ, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ, ಎಸ್.ಡಿ.ಎಂ ಆಸ್ಪತ್ರೆ, ಗ್ರಾಮಾಭಿವೃದ್ಧಿ ಯೋಜನೆ ಪರಿಚಯ ಮಳಿಗೆ, ಸಿರಿ ಉತ್ಪನ್ನಗಳು. ನರ್ಸರಿ, ಫ್ಯಾನ್ಸಿ ಟಾಯ್ಸ್, ತರಕಾರಿ ಬೀಜಗಳು, ವಸ್ತ್ರಮಳಿಗೆಗಳು, ಅಗರಬತ್ತಿಗಳು,ಇಲೆಕ್ಟ್ರಾನಿಕ್ ವಸ್ತುಗಳು ಆಯುರ್ವೇದಿಕ್ ಉತ್ಪನ್ನಗಳು, ಅಗ್ರೀಲೀಫ್, ಅಕ್ಕೇರಿಯಂ ಸಿಲ್ವೇರಿಯಾ, ಸಿರಿಧಾನ್ಯ, ಪೂಜಾ ಸಾಮಾಗ್ರಿಗಳು, ಸ್ಟೀಲ್ ಐಟಂ, ಚಪ್ಪಲಿ, 1 ಗ್ರಾಂ ಗೋಲ್ಡ್ ಮ್ಯಾಜಿಕ್ ಟವೆಲ್, ಸ್ಟೇಷನರಿ, ವಾಜ್, ಡ್ರೈಫೂಟ್ಸ್, ಏರ್ ತಿಂಡಿ ತಿನಿಸುಗಳು, ಕೂಲರ್, ಲ್ಯಾಡರ್, ಕಬ್ಬಿನ ಜ್ಯೂಸ್, ಐಸ್ಟೀಂ, ಸೋಲಾರ್, ಹೈದರಾಬಾದ್ ಮಸಾಜ್ ಬ್ಯಾಗ್, ಅಲಂಕಾರಿಕಾ ಹೂವು, ಗೃಹೋಪಯೋಗಿ ವಸ್ತು, ಉಪ್ಪಿನಕಾಯಿ, ಹೋಮ್ ಮೇಡ್ ಬ್ಯಾಗ್, ಪ್ಲಾಸ್ಟಿಕ್ ಐಟಂ, ಮೊಬೈಲ್ ಕವರ್, ಬಯೋಮ್ಯಾಗ್ನೆಟಿಕ್ ಜನರನ್ನು ಆಕರ್ಷಿಸುತ್ತಿವೆ.

ನ.15ರಿಂದ 19ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ವಸ್ತುಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ವಸ್ತುಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

SDN ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ವಂದ್ರ ಎಸ್, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಪಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. ಜನಾರ್ದನ್, ಮಾರ್ಗದರ್ಶಕರಾದ ಪ್ರೊ। ಎಸ್. ಪ್ರಭಾಕರ್, ಡಿ.ಹರ್ಷೇಂದ್ರ ಕುಮಾರ್ ಮತ್ತು ಸಮಿತಿ ಸದಸ್ಯರಾದ ವೀರು ಶೆಟ್ಟಿ ಧರ್ಮಸ್ಥಳ, ಮೋಹನ್ ಶೆಟ್ಟಿಗಾರ್ ಉಜಿರೆ, ಪ್ರಭಾಕರ DMC, ಯಶೋಧರ DMC, ರೋ।। ಅನಂತ ಭಟ್ ಮಚ್ಚಿಮಲೆ, ರೋ॥ ಸಂದೇಶ್ ರಾವ್, ಜಯಶ್ರೀ HM ಧರ್ಮಸ್ಥಳ, ಬೇಬಿ ಕುಮಾರ್ SDM TRUST, ಲ||. ರಾಮಕೃಷ್ಣ ಗೌಡ, ಲ||.ರವೀಂದ್ರ ಶೆಟ್ಟಿ, ಸುಬ್ರಹ್ಮಣ್ಯ ಪ್ರಸಾದ್ ಧರ್ಮಸ್ಥಳ, ಯುವರಾಜ್ SDM ಧರ್ಮಸ್ಥಳ, ರಕ್ಷಿತ್ D M C, ಕೇಶವ ಪಿ. ಗೌಡ ಬೆಳಾಲು, ಅಜೇಯ ರಾಮಚಂದ್ರ ಶೆಟ್ಟಿ, ಪ್ರಶಾಂತ್ ಅಮೃತ್ ಸಿಲ್ಕ್, ಶೈಲೇಶ್ ಅರಿಗ ಎಸ್‌.ಡಿ.ಎಂ ಸೊಸೈಟಿ, ಸಂಪತ್ ಕುಮಾರ್ ಎಸ್‌.ಡಿ.ಎಂ ಪಾಲಿಟೆಕ್ನಿಕ್, ಮಂಜು ಆರ್. ಡಿ.ಎಡ್ ಕಾಲೇಜು, ಸಾಂತಪ್ಪ ಡಿಎಂಸಿ. ಭಾಗವಹಿಸಿದ್ದರು.

Exit mobile version