ಬೆಳ್ತಂಗಡಿ: ಬಿಹಾರದ 243 ವಿಧಾನಸಭಾ ಕ್ಷೇತ್ರದಲ್ಲಿ 207 ಸ್ಥಾನವನ್ನು ಪಡೆದು ಆಡಳಿತದ ಚುಕ್ಕಾನಿ ಹಿಡಿದಿದೆ. ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಮಹಾಘಟಬಂಧನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ಎರಡೂ ಮೈತ್ರಿಕೂಟಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ.ಇದೀಗ ಎನ್‌ಡಿಎ ಸರ್ಕಾರವು ಸ್ಪಷ್ಟ ಬಹುಮತವನ್ನು ಪಡೆದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ನ. 14ರಂದು ಬೆಳ್ತಂಗಡಿ ಬಿಜೆಪಿ ಮಂಡಲ ಕಚೇರಿ ಮುಂಭಾಗದಲ್ಲಿ ಸಂಭ್ರಮಾಚರಣೆಯನ್ನು ನಡೆಸಿದರು.
ಬಳಿಕ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಈ ಚುನಾವಣೆ ದೇಶಕ್ಕೆ ಒಂದು ಉತ್ತಮವಾದ ನಾಯಕತ್ವದ ಉತ್ತರವನ್ನು ಕೊಡುತ್ತಿದೆ. ಬಿಜೆಪಿ ಪಕ್ಷದ ಅಭೂತಪೂರ್ವ ಸಾಧನೆ ಬಿಹಾರ ಚುನಾವಣೆಯಲ್ಲಿ 207 ಸ್ಥಾನವನ್ನು ಎನ್.ಡಿ.ಎ ಮಡಿಲಿಗೆ ಹಾಕುವ ಮೂಲಕ ಪ್ರಜಾಪ್ರಭುತ್ವ ದೇಶದ ಅಭಿವೃದ್ದಿಯ ಉತ್ತರವನ್ನು ಈ ಚುನಾವಣೆ ನೀಡಿದೆ.
ಮತದಾರರಿಗೆ ಸಿಕ್ಕಿದಂತಹ ಅವಕಾಶವನ್ನು ಸದ್ವಿನಿಯೋಗ ಮಾಡಿದ್ದಾರೆ. ಮುಂದಿನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್.ಡಿ.ಎ ಗೆಲುವು ಸಾಧಿಸಲಿ. ಇದರ ಜೊತೆಗೆ ದೆಹಲಿಯಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬೆಳ್ತಂಗಡಿ ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ, ಮೋಹನ್ ಅಂಡಿಂಜೆ , ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್, ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಗಣೇಶ್, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ್, ಪ್ರಮುಖರಾದ ಚಂದ್ರಕಾಂತ್ ನಿಡ್ಡಾಜೆ, ಜಗದೀಶ್, ಮಂಜುನಾಥ್ ಬೆಳ್ತಂಗಡಿ, ಚೆನ್ನಕೇಶವ ಮುಂಡಾಜೆ, ವಿಠಲ ಆಚಾರ್ಯ ನೇಮಯ್ಯ ವೇಣೂರು, ಅಭಿಜಿತ್ ನಾರಾವಿ, ಪ್ರಭಾಕರ ಆಚಾರ್ಯ, ನಿರಂಜನ್ ಶೆಟ್ಟಿ, ಜಯಂತ್ ಗೌಡ ಕನ್ಯಾಡಿ , ಚಂಚಲಾಕ್ಷಿ ಕಲ್ಲೇರಿ, ಆಶಾಲತಾ ಪ್ರಶಾಂತ್ ಎಂ. ಉಪಸ್ಥಿತರಿದ್ದರು.

