


ಬೆಳ್ತಂಗಡಿ: ವರ್ಷಂಪ್ರತಿ ನಡೆಯುವ ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವವು ಡಿ.13ರಂದು ಸಂಜೆ 6ಗಂಟೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ನ.14 ರಂದು ಪಾಡ್ಯಾರು ಬೀಡುವಿನಲ್ಲಿ ಬಿಡುಗಡೆ ಮಾಡಲಾಯಿತು.
ಪಿಲಿ ಚಾಮುಂಡಿ ಕಲ್ಲು ದೊಂಪದಬಲಿ ಉತ್ಸವದ ಗೌರವ ಅಧ್ಯಕ್ಷ ಪ್ರವೀಣ್ ಕುಮಾರ್ ಅಜ್ರಿ, ಅಧ್ಯಕ್ಷ ಶಿವಾಜಿ ರಾವ್ ಗದ್ದೆಮನೆ, ಮಾಜಿ ಅಧ್ಯಕ್ಷ ಸೋಮಶೇಖರ್ ದೇವಸ್ಯ, ಪ್ರಧಾನ ಕಾರ್ಯದರ್ಶಿ ವಿತೇಶ್ ಪಾಡ್ಯಾರು, ಕೋಶಾಧಿಕಾರಿ ನಾರಾಯಣ ಆಚಾರ್ಯ, ಸದಸ್ಯರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಶಶಿರಾಜ್ ಶೆಟ್ಟಿ, ಪುರಂದರ ಶೆಟ್ಟಿ ಪಾಡ್ಯಾರು, ರಾಮಚಂದ್ರ ಶೆಟ್ಟಿ ಪಾಡ್ಯಾರು, ಪ್ರದೀಪ್ ಶೆಟ್ಟಿ, ಉಪಸ್ಥಿತರಿದ್ದರು.


ಈ ಮಹೋತ್ಸವಕ್ಕೆ ಎಲ್ಲಾ ಧರ್ಮಾಭಿಮಾನಿಗಳು ಆಗಮಿಸಿ, ಕ್ಷೇತ್ರದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪಿಲಿ ಚಾಮುಂಡಿ ದೊಂಪದಬಲಿ ಉತ್ಸವ ಸಮಿತಿ ಕೇಳಿಕೊಂಡಿದ್ದಾರೆ.

ವಿಶೇಷ ಸೂಚನೆ:
- ಪ್ರತಿ ಮನೆಯ ಭಕ್ತಾಭಿಮಾನಿಗಳು ಕನಿಷ್ಠ 2 ತೆಂಗಿನಕಾಯಿ, 2 ಎಳನೀರು (ಸೀಯಾಳ) 1 ಸೇರು ಅಕ್ಕಿ, ಎಳ್ಳೆಣ್ಣೆ ಹಾಗೂ ಹೆಚ್ಚಿನ ಧನಸಹಾಯವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ.
- ಸಾಯಂಕಾಲ ಗಂಟೆ 5-00ಕ್ಕೆ ಪಾಡ್ಯಾರುಬೀಡು ಮನೆಯಿಂದ ಭಂಡಾರದ ಮೆರವಣಿಗೆ ಹೊರಡಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು.
- ರಾತ್ರಿ 7.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.
- ಸಾರ್ವಜನಿಕ ಅನ್ನಸಂತರ್ಪಣೆ ಇರುವುದರಿಂದ ಭಕ್ತಾದಿಗಳಿಂದ ಅಕ್ಕಿ, ತೆಂಗಿನಕಾಯಿ, ತರಕಾರಿಗಳನ್ನು ಸ್ವೀಕರಿಸಲಾಗುವುದು.









