ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಪ್ರಭಾರ ಮುಖ್ಯ ಶಿಕ್ಷಕಿ ಜೆಸಿಂತಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು. ಮಕ್ಕಳ ಮುಂದಿನ ಬಾಳು ಉಜ್ವಲವಾಗಿರಲಿ, ಉತ್ತಮ ಭವಿಷ್ಯವಿರಲಿ ಎಂದು ಶುಭ ಹಾರೈಸಿದರು. ಮಕ್ಕಳಿಗೆ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಶಾಲಾ ನಾಯಕಿ ಪೂರ್ವಿ ಹಾಗೂ ಉಪನಾಯಕ ವಿನಿತ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸೌಮ್ಯ, ಅಮಿತಾ, ಸಹನಾ ನೀತಾ ಕೆ.ಎಸ್., ಪ್ರೇಯಂಸಾ ಜೈನ್, ಪ್ರವೀಣ್ ಅವರ ಅಯೋಜನೆಯೊಂದಿಗೆ, ಶಿಕ್ಷಕ ವೃಂದದ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು.

