ಬಳಂಜ: ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛತೆ ಮಾಡುವ ಉದ್ದೇಶದಿಂದ ಶ್ರಮದಾನ ಕಾರ್ಯಕ್ರಮವು ನ. 9ರಂದು ನಡೆಯಿತು.
ಮಂಡಳಿಯ ಪ್ರಧಾನ ಸಂಚಾಲಕ ಹಾಗೂ ಬಳಂಜ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ ಚಂದ್ರಮ ಅವರ ನೇತೃತ್ವದಲ್ಲಿ ದೇವಸ್ಥಾನದ ಮುಂಭಾಗದಲ್ಲಿದ್ದ ಹುಲ್ಲು ಹಾಗೂ ಗಿಡ ಗಂಟಿಗಳನ್ನು ನಾರಾಯಣ ಪೂಜಾರಿ ಮಜ್ಜೆನಿ ಇವರುವಕಳೆ ತೆಗೆಯುವ ಯಂತ್ರದ ಮೂಲಕ ತೆಗೆದು ದೇವಸ್ಥಾನದ ವಠಾರವನ್ನು ಸುಂದರಗೊಳಿಸಿದರು. ಬ್ರಹ್ಮಶ್ರೀ ಮಂಡಳಿ ಸದಸ್ಯರು ಮತ್ತು ಸೂಳಬೆಟ್ಟು ಪ್ರಮೋದ್ ಪೂಜಾರಿ ಅವರ ನೇತೃತ್ವದ ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರು ಜೊತೆಯಾಗಿ ಪ್ರಾಂಗಣವನ್ನು ಗುಡಿಸಿ ಸ್ವಚ್ಛಗೊಳಿಸಿ ಎಲ್ಲರಿಗೂ ಮಾದರಿಯಾದರು.
ಮಂಡಳಿಯ ಸದಸ್ಯರೊಬ್ಬರ ಮನೆಯ ವಠಾರದಲ್ಲಿ ಸಹ ಶ್ರಮದಾನ ಮಾಡಲಾಯಿತು. ಈಗಾಗಲೇ ಹಲವಾರು ಸಮಾಜಮುಖಿ ಸೇವೆಯನ್ನು ಮಾಡಿರುವ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯವರ ಈ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಡಳಿಯ ಅಧ್ಯಕ್ಷ್ಯೆ ಪ್ರಸಿದ್ದಿ ಶೆಟ್ಟಿ, ತರಬೇತುದಾರೆ ಮಾನ್ಯ, ಸಂಚಾಲಕ ಹರೀಶ್ ವೈ ಚಂದ್ರಮ, ಶ್ರೀ ಕೃಷ್ಣ ಭಜನಾ ಮಂಡಳಿ ಸಂಚಾಲಕ ಪ್ರಮೋದ್ ಪೂಜಾರಿ, ನಾರಾಯಣ ಪೂಜಾರಿ ಮಜ್ಜೆನಿ, ಕಲಾವತಿ ಮಜ್ಜೆನಿ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

