




ನಡ: ಮಂಜೊಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 12ರಂದು ನಡೆದ ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಂಜೊಟ್ಟಿ ರಝಾ ಗಾರ್ಡನ್ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ 6ನೇ ತರಗತಿಯ ಫಾತಿಮತ್ ಝಿಯ ಅರಬಿಕ್ ಪಠಣ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ನಾಲ್ಕನೇ ತರಗತಿಯ ಹನ ಫಾತಿಮಾ ಅರಬಿಕ್ ಪಠಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಆರನೇ ತರಗತಿಯ ಆಫೀಫಾ ಸನಾ ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ ಸ್ಥಾನವನ್ನು, 7ನೇ ತರಗತಿಯ ರಿಯಾ ಫಾತಿಮಾ ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನವನ್ನು, 7ನೇ ತರಗತಿಯ ಮೊಹಮ್ಮದ್ ಮಾಝಿನ್ ಕನ್ನಡ ಕಂಠಪಾಠದಲ್ಲಿ ದ್ವಿತೀಯ ಸ್ಥಾನವನ್ನು, ನಾಲ್ಕನೇ ತರಗತಿಯ ನಿಹಾರಿಕ ಭಗವದ್ಗೀತಾ ಪಠಣದಲ್ಲಿ ದ್ವಿತೀಯ ಸ್ಥಾನವನ್ನು, ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಎರಡನೇ ತರಗತಿಯ ಮೊಹಮ್ಮದ್ ಶಮ್ಮಾಝ್ ಇಂಗ್ಲಿಷ್ ಕಂಠ ಪಾಠದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಶಾಲಾ ಆಡಳಿತ ಟ್ರಸ್ಟ್, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.









