Site icon Suddi Belthangady

14ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ: ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಬಂದಾರು ಗ್ರಾಮ ಖಂಡಿಗ ನಿವಾಸಿ ಚೆನ್ನಮ್ಮ ರಾಮ್ಮಣ್ಣ ಗೌಡ ದಂಪತಿಗಳ ಮೊಮ್ಮಗ ಬಂಟ್ವಾಳ ತಾಲೂಕು ವಿಟ್ಲ ದೇವಸ್ಯ ನಿವಾಸಿ ಮೀನಾಕ್ಷಿ ಚೆನ್ನಪ್ಪ ದಂಪತಿಗಳ ಪುತ್ರ ವಿಟ್ಲ ಪಿ.ಎಂ.ಶ್ರೀ. ಸರಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಅವರು ಶಾಲಾ ಶಿಕ್ಷಣ ಇಲಾಖೆ ಏರ್ಪಡಿಸಿದ್ದ 14ನೇ ವಯೋಮಾನದ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೈಸೂರು ವಿಭಾಗವನ್ನು ಪ್ರತಿನಿಧಿಸಿ ನ.10 ಮತ್ತು 11ರಂದು ಡಾ. ಬಿ. ಆರ್.ಅಂಬೇಡ್ಕರ್ ಕ್ರೀಡಾಂಗಣ ಬಸವೇಶ್ವರ ನಗರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಂಡ್ಯ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಜೊತೆಗೆ ಬೆಸ್ಟ್ ರೈಡರ್ ವೈಯಕ್ತಿಕ ಬಹುಮಾನ ತನ್ನದಾಗಿಸಿಕೊಂಡು ಛತ್ತೀಸ್ ಗಢದಲ್ಲಿ ನಡೆಯುವ ರಾಷ್ಟ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

Exit mobile version