Site icon Suddi Belthangady

ಪಿಲಿಗೂಡು-ಉಪ್ಪಿನಂಗಡಿ ಹೊಂಡಗುಂಡಿ ರಸ್ತೆ-ಗುಂಡಿಮುಚ್ಚದೆ ಮಿಶ್ರಬೆಳೆಯ ಗಿಡಗಳ ತೆರವು-ಜನರು ಆಕ್ರೋಶದಿಂದ ನೆಟ್ಟ ಅಡಿಕೆ, ತೆಂಗು, ಬಾಳೆ, ಸುವರ್ಣಗೆಡ್ಡೆ ಗಿಡಗಳ ತೆರವು

ಉಪ್ಪಿನಂಗಡಿ: ಪಿಲಿಗೂಡು ಉಪ್ಪಿನಂಗಡಿ ರಸ್ತೆ ತೀವ್ರ ಹದಗೆಟ್ಟು, ದಿನದಿಂದ ದಿನಕ್ಕೆ ಹೊಂಡಗಳ ಆಳ, ಅಗಳ ಹೆಚ್ಚಾಗುತ್ತಿದೆ. ಅದರ ಜೊತೆ ಹೊಸ ಹೊಂಡಗಳ ಹುಟ್ಟು ನಿರಂತರವಾಗಿ ಜಾಸ್ತಿಯಾಗುತ್ತಲೇ ಇದೆ‌. ಇದರ ಬಗ್ಗೆ ಆಕ್ರೋಶಗೊಂಡಿರುವ ಜನರು ನ.12ರಂದು ಕುಪ್ಪೆಟ್ಟಿಯ ಶಿವಗಿರಿ ಬಳಿ ರಸ್ತೆಯಲ್ಲೇ ಎರಡು ಗಿಡ ನೆಟ್ಟಿದ್ದರು. ನ.13ರಂದು ಒಟ್ಟು ಆರಕ್ಕೂ ಹೆಚ್ಚು ಗಿಡ ನೆಡಲಾಗಿತ್ತು. ಈ ಬಗ್ಗೆ ಸುದ್ದಿ ಮಿಶ್ರಬೆಳೆಯ ತೋಟವಾಗ್ತಿದೆ. ಪಿಲಿಗೂಡು ಉಪ್ಪಿನಂಗಡಿ ರಸ್ತೆ ಎಂದು ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆಯ ಗುಂಡಿಗೆ ಯಾವುದೇ ಹಾನಿ ಮಾಡದೇ, ಜನರು ನೆಟ್ಟ ಗಿಡಗಳನ್ನು ತೆರವುಗೊಳಿಸಿದ್ದಾರೆ‌. ಆದರೆ ಗುಂಡಿ ಹಾಗೇಯೇ ಇದ್ದು ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Exit mobile version