ಬೆಳ್ತಂಗಡಿ: ತಾಲೂಕು ಗ್ರಾಮೀಣ ಮಹಿಳಾ ಕಾಂಗ್ರೆಸ್ ನಿಂದ ದ. ಕ. ಜಿಲ್ಲಾ ಘಟಕಕ್ಕೆ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ದ. ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿ ಸುಮಂಗಲ ಜಿನ್ನಪ್ಪ ನಾಯ್ಕ, ಸಿಂಧು ಡೆನ್ನಿಸ್ ಪುದುವೆಟ್ಟು ಜಿಲ್ಲಾ ಕಾರ್ಯದರ್ಶಿ, ವಿಜಯ ಲಕ್ಷ್ಮೀ ಎನ್. ಡಿ. ಜಿಲ್ಲಾ ಮಹಿಳಾ ಕಾಂಗ್ರೆಸ್ ಗ್ರಾಮೀಣ ಪ್ರಧಾನ ಕಾರ್ಯದರ್ಶಿ, ಡಯಾನಾ ಕಮಲ್ ದಾಸ್ ಪ್ರಧಾನ ಕಾರ್ಯದರ್ಶಿ, ತನುಜಾ ಶೇಖರ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಗ್ರಾಮೀಣ ಉಸ್ತುವಾರಿ, ಲೋಕೇಶ್ವರಿ ವಿನಯಚಂದ್ರ ಉಸ್ತುವಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಗ್ರಾಮೀಣ ವಿಭಾಗದಿಂದ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಮಿ ಪ್ರಸಾದ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವಿವಿಧ ಪದಾಧಿಕಾರಿಗಳ ಆಯ್ಕೆ

