Site icon Suddi Belthangady

ವಲಯ ಮಟ್ಟದ ಪ್ರತಿಭಾ ಕಾರಂಜಿ: ಬೆದ್ರಬೆಟ್ಟು ಮರಿಯಾಂಬಿಕಾ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ನಡ: ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ಬೆದ್ರಬೆಟ್ಟು ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಇಂಗ್ಲಿಷ್ ಕಂಠಪಾಠ ಕಿರಿಯರ ವಿಭಾಗದಲ್ಲಿ ಫಾತಿಮತ್ ಮಿನ್ದ 4ನೇ ತರಗತಿ ಪ್ರಥಮ ಸ್ಥಾನ, ಹಿರಿಯರ ವಿಭಾಗದಲ್ಲಿ ಆರ್ನಿಕ 7ನೇ ತರಗತಿ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ : ಕಿರಿಯರ ವಿಭಾಗದಲ್ಲಿ ಮೊಹಮ್ಮದ್ ಅನಾಸ್ 4ನೇ ತರಗತಿ ತೃತೀಯ ಸ್ಥಾನ, ಹಿರಿಯರ ವಿಭಾಗದಲ್ಲಿ ಮೊಹಮ್ಮದ್ ಅಲಿ ಜಾಹಾ‌ರ್ 6ನೇ ತರಗತಿ ದ್ವಿತೀಯ ಸ್ಥಾನ, ಕನ್ನಡ ಕಂಠಪಾಠ ಕಿರಿಯರ ವಿಭಾಗದಲ್ಲಿ ಸಾನಿಕ 4ನೇ ತರಗತಿ ದ್ವಿತೀಯ ಸ್ಥಾನ, ಹಿರಿಯ ವಿಭಾಗದಲ್ಲಿ ಪ್ರತ್ಯಶ 7ನೇ ತರಗತಿ ತೃತೀಯ ಸ್ಥಾನ, ಧಾರ್ಮಿಕ ಪಠಣ ಸಂಸ್ಕೃತ ಹಿರಿಯರ ವಿಭಾಗದಲ್ಲಿ ಪೂರ್ವಿಕ 7ನೇ ತರಗತಿ ದ್ವಿತೀಯ ಸ್ಥಾನ, ಪ್ರಬಂಧ ಹಿರಿಯರ ವಿಭಾಗದಲ್ಲಿ ಲಿಖಿತ 7ನೇ ತರಗತಿ ದ್ವಿತೀಯ ಸ್ಥಾನ, ಅಭಿನಯ ಗೀತೆ ಹಿರಿಯರ ವಿಭಾಗದಲ್ಲಿ ಆತ್ಮಿಕ 7ನೇ ತರಗತಿ ದ್ವಿತೀಯ ಸ್ಥಾನ, ಭಕ್ತಿಗೀತೆ ಕಿರಿಯರ ವಿಭಾಗದಲ್ಲಿ ಹೃಶ್ಚಿ ನಾಲ್ಕನೇ ತರಗತಿ ದ್ವಿತೀಯ ಸ್ಥಾನ, ಪ್ಲೇ ಮಾಡಲಿಂಗ್ ಹಿರಿಯರ ವಿಭಾಗದಲ್ಲಿ ಸನ್ವಿತ್ ಏಳನೇ ತರಗತಿ ಪ್ರಥಮ ಸ್ಥಾನ, ಚಿತ್ರಕಲೆ ಕಿರಿಯರ ವಿಭಾಗದಲ್ಲಿ ನಿಧಿ 4ನೇ ತರಗತಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಹೀಗೆ ನಾಲ್ಕು ವಿದ್ಯಾರ್ಥಿಗಳು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು
ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Exit mobile version