Site icon Suddi Belthangady

ಉಜಿರೆ: ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್‌ ಕಳವು

ಉಜಿರೆ: ರಸ್ತೆ ಬದಿ ನಿಲ್ಲಿಸಿದ ಸ್ಕೂಟರನ್ನು ಕಳವು ಮಾಡಿರುವ ಘಟನೆ ನ.12ರಂದು ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಬೆಳಾಲು ಗ್ರಾಮದ ದೊಂಪದಪಲಿಕೆ ನಿವಾಸಿ ಧರ್ಮಪಾಲ್‌ ಜೈನ್‌ ಬಿ.ಸಿ. ಅವರ ದೂರಿನಂತೆ ಧರ್ಮಪಾಲ್‌ ಅವರು ನ.12ರಂದು ಅಕ್ಟಿವಾ ಸ್ಕೂಟರ್‌ ನಿಲ್ಲಿಸಿ ತರಕಾರಿ ಖರೀದಿಸಿ ಬಂದು ನೋಡಿದಾಗ ಸ್ಕೂಟರ್‌ ಕಳವಾಗಿತ್ತು. ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದು ಕಳೆದು ಹೋದ ಸ್ಕೂಟರಿನ ಮೌಲ್ಯ ರೂ. 60,000 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೋಲಿಸ್‌ ಠಾಣೆಯಲ್ಲಿ ಅ.ಕ್ರ 134/2025 ಕಲಂ 303(2) ಬಿ ಎನ್‌ ಎಸ್‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

Exit mobile version