Site icon Suddi Belthangady

ವಿದ್ಯಾಮಾತಾ ಅಕಾಡೆಮಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇಮಕಾತಿ 2025ಕ್ಕೆ ಉಚಿತ ತರಬೇತಿ ಆಯೋಜನೆ

ಬೆಳ್ತಂಗಡಿ: ನ. 21ರಿಂದ 23 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ Teritorial Army ನೇಮಕಾತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನ.15ರಿಂದ 19ರವರೆಗೆ ಮೈದಾನ ತರಬೇತಿ ಮತ್ತು ಲಿಖಿತ ಪರೀಕ್ಷೆಯ ಉಚಿತ ಪೂರ್ವ ಸಿದ್ದತಾ ತರಬೇತಿಯನ್ನು ವಿದ್ಯಾಮಾತಾ ಅಕಾಡೆಮಿಯು ಆಯೋಜನೆ ಮಾಡಿದೆ. ಉಚಿತ ವಸತಿಯೊಂದಿಗೆ ರ್ಯಾಲಿ ಗೆ ಹಾಜರಾಗುವ ಅಭ್ಯರ್ಥಿಗಳು ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಲು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ನೇಮಕಾತಿಯ ಮಾನದಂಡಗಳು:

•ನ. 21 ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ: ಕೊಪ್ಪಳ, ಧಾರವಾಡ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಕೊಡಗು, ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಮಗಳೂರು.

•ನ. 22ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ: ದಕ್ಷಿಣ ಕನ್ನಡ, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಾಗಲಕೋಟೆ, ಹಾಸನ, ಉತ್ತರ ಕನ್ನಡ, ಚಾಮರಾಜನಗರ

•ನ.23ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ: ಉಡುಪಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ರಾಯಚೂರು, ಗದಗ, ಹಾವೇರಿ, ವಿಜಯಪುರ, ವಿಜಯನಗರ, ಯಾದಗಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ವಿದ್ಯಾಮಾತಾ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ& ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ ಪುತ್ತೂರು /ಸುಳ್ಯ /ಕಾರ್ಕಳ PH: 9620468869 / 9148935808.

Exit mobile version