ಬೆಳ್ತಂಗಡಿ: ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ ‘ಆಸ್ಕರ್ ಕೃಷ್ಣ’ ಸಾರಥ್ಯದ “ಕಲಾಭೂಮಿ ಪ್ರತಿಷ್ಠಾನ” ದ ವತಿಯಿಂದ 2025ನೇ ಸಾಲಿನ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ಸಮಾರಂಭ ನ. 12ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳೂ ಹಾಗೂ ಸಂಸ್ಕೃತಿ ಚಿಂತಕ ಡಾ. ರಾಜಶೇಖರಯ್ಯ ಮಠಪತಿ ಅವರು ಉದ್ಘಾಟಿಸಿದರು. ಖ್ಯಾತ ಚಲನಚಿತ್ರ ನಿರ್ದೇಶಕ ಜೋಸೈಮನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 70 ಜನ ಸಾಧಕರು, ಸಮಾಜ ಸೇವಕರು, ಪ್ರತಿಭಾನ್ವಿತರಿಗೆ ಹಾಗೂ ಮುಂಡಾಜೆ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯ ದಿನೇಶ್ ಆಚಾರ್ಯ ಅವರ ಯಕ್ಷಗಾನ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಗಣನೀಯ ಪ್ರತಿಭೆಯನ್ನು ಮನಗಂಡು “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-2025” ನ್ನು ನೀಡಿ ಗೌರವಿಸಿದರು.

