Site icon Suddi Belthangady

ರೆಖ್ಯ: ಅಗ್ನಿ ದುರಂತಕ್ಕೆ ಒಳಗಾದ ಕೊಲಾರು ಬಾಲಕೃಷ್ಣ ಮನೆ: ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು

ರೆಖ್ಯ: ಕೊಲಾರು ನಿವಾಸಿ ಬಾಲಕೃಷ್ಣ ಅವರ ವಾಸದ ಮನೆ ನ. 13ರಂದು ಮುಂಜಾನೆ ಆಕಸ್ಮಿಕವಾಗಿ ಅಗ್ನಿ ತಗುಲಿ ಸುಟ್ಟು ಕರಕಲಾಗಿದೆ. ಮನೆ ಮಂದಿ ಕೆಲಸಕ್ಕೆ ಹೋದ ಕಾರಣ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ 45,000 ಹಣ ಒಡವೆ ಮಕ್ಕಳ ಪುಸ್ತಕ ಬಟ್ಟೆ ಬರೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಮನೆ ಮಂದಿಯೆಲ್ಲ ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಜನಾರ್ಧನ್ ರೆಖ್ಯ, ಮತ್ತು ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version