ಬೆಳ್ತಂಗಡಿ: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಉzಶದಿಂದ ರಾಷ್ಟ್ರದಾದ್ಯಂತ ಆಯೋಜಿಸಲಾಗುವ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ರಚನಾ ಸಭೆ ನ.೧೨ ರಂದು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ನಾ. ಸೀತಾರಾಮ ಅವರು ಮಾತನಾಡಿ ಹಿಂದೂ ಸಂಗಮದ ಆಶಯವು ಸಮಾಜದಲ್ಲಿ ಆತ್ಮವಿಶ್ವಾಸ, ಪರಸ್ಪರ ಭಾವೈಕ್ಯತೆ ಮತ್ತು ಧಾರ್ಮಿಕ ಸಹಭಾವ ಬೆಳೆಸುವುದಾಗಿದೆ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ, ಗಣೇಶ್ ಕಾಂತಜೆ, ಚಿರನ್, ನವೀನ್ ನೆರಿಯ, ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ವಿಜಯ ಅರಳಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಸಮಿತಿಯ ರಚನೆಯನ್ನು ಮಾಡಲಾಗಿದ್ದು ಅಧ್ಯಕ್ಷರಾಗಿ ಅಜಿತ್ ಜಿ. ಶೆಟ್ಟಿ ಕೊರಿಯಾರ್, ಉಪಾಧ್ಯಕ್ಷರಾಗಿ ಈಶ್ವರ ಬೈರ, ಪ್ರೀತಿ ರಾವ್, ಗಂಗಾಧರ್ ರಾವ್, ವಸಂತ ಮಜಲು, ಕಾರ್ಯದರ್ಶಿಯಾಗಿ ವಸಂತ ಮರಕಡ, ಸಂಚಾಲಕರಾಗಿ ಅನಿಲ್ ಕುಮಾರ್ ಯು., ಸಹ ಕಾರ್ಯದರ್ಶಿಗಳಾಗಿ ತುಕಾರಾಮ್ ಬಿ, ಶ್ರೇಯಾ ಶೆಟ್ಟಿ, ಸುರಕ್ಷಾ ಆಚಾರ್ಯ, ಕೋಶಾಧಿಕಾರಿಯಾಗಿ ಸ್ವಸ್ತಿಕ್,ಸಹ ಕೋಶಾಧಿಕಾರಿಯಾಗಿ ಪ್ರಭಾಕರ ಉಪ್ಪಡ್ಕ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಯಿತು.
