Site icon Suddi Belthangady

ಧರ್ಮಸ್ಥಳ: 20ನೇ ವಿಜಯ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಶಾಖೆ ಉದ್ಘಾಟನೆ-ಸಾವಿರಾರು ಜನತೆಗೆ ಉದ್ಯೋಗ ಕೊಡುವ ಸಂಸ್ಥೆಯಾಗಿ ಬೆಳೆಯಲಿ: ಶಾಸಕ ಹರೀಶ್ ಪೂಂಜ

ಧರ್ಮಸ್ಥಳ: ವಿಜಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 20ನೇ ಶಾಖೆ ನ.13ರಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗದ ಕಟ್ಟಡದ ಕಚೇರಿ ಉದ್ಘಾಟನೆಯನ್ನು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಹೇಮಾವತಿ ವಿ.ಹೆಗ್ಗಡೆ ಮತ್ತು ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದದೊಂದಿಗೆ ನೂತನ ಶಾಖೆ ಉದ್ಘಾಟನೆಗೊಂಡಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲಿಸಿ 2026 ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿರುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ, ದೇವರ ಆಶೀರ್ವಾದದಿಂದ ಇನ್ನು ಎತ್ತರಕ್ಕೆ ಬೆಳೆಯಲಿ, ಒಳ್ಳೆಯ ನಗುವಿನ ಸಿಬ್ಬಂದಿಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು ಸಾವಿರಾರು ಜನತೆಗೆ ಉದ್ಯೋಗ ಕೊಡುವ ಸಂಸ್ಥೆಯಾಗಿ ಬೆಳೆಯಲಿ ಎಂದರು.

ಉಪಾಧ್ಯಕ್ಷ ಜಯಂತ್ ಕೆ. ಶೆಟ್ಟಿ, ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್, ತಾ .ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿ ಗುಡ್ಡೆ, ನಿರ್ದೇಶಕರಾದ ಎಸ್. ಜಯರಾಮ್ ಶೆಟ್ಟಿ, ಬಾಲಕೃಷ್ಣ ಪೂಂಜ ಎಚ್., ಪುಷ್ಪರಾಜ ಶೆಟ್ಟಿ, ರಘುರಾಮ್ ಶೆಟ್ಟಿ ಎ., ಶ್ರೀಕೃಷ್ಣ ರೈ ಟಿ., ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ, ಮಂಜುನಾಥ್ ರೈ, ರಾಜೇಶ್ ಶೆಟ್ಟಿ ಬೆಂಗೆತ್ತಾರು, ಸಾರಿಕಾ ಶೆಟ್ಟಿ, ವಿಜಯ ಬಿ. ಶೆಟ್ಟಿ, ಧರ್ಮಸ್ಥಳ ಶಾಖಾ ಪ್ರಬಂಧಕ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಧನ್ಯವಾದವಿತ್ತರು.

Exit mobile version