ಉಪ್ಪಿನಂಗಡಿ: ಪಿಲಿಗೂಡು ಉಪ್ಪಿನಂಗಡಿ ರಸ್ತೆ ದಿನದಿಂದ ದಿನಕ್ಕೆ ಮಿಶ್ರಬೆಳೆಯ ತೋಟವಾಗಿ ಮಾರ್ಪಾಡಾಗುತ್ತಿದೆ. ನ.12ರಂದು ಕುಪ್ಪೆಟ್ಟಿಯ ಶಿವಗಿರಿ ಬಳಿ ಎರಡು ಗಿಡ ನೆಡಲಾಗಿತ್ತು. ಇಂದು ಬೆಳಗ್ಗೆ ಒಟ್ಟು ಆರಕ್ಕೂ ಹೆಚ್ಚು ಗಿಡ ನೆಡಲಾಗಿದೆ. ಈ ಮೂಲಕ ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ಹೊಂಡಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಹೊಂಡ ಗುಂಡಿಗೆ ಅಲ್ಲಲ್ಲಿ ಗಿಡನೆಡುವ ಮೂಲಕ ಸಾರ್ವರಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಎರಡಿದ್ದ ಗಿಡ ಇಂದು ಆರಕ್ಕೂ ಹೆಚ್ಚಾಗಿದೆ. ಈ ಮೂಲಕ ರಸ್ತೆ ಮಿಶ್ರಬೆಳೆಯ ತೋಟವಾಗಿ ಮಾರ್ಪಾಡಾಗಿದ್ದು ತೆಂಗು,ಬಾಳೆ,ಅಡಿಕೆ, ಸುವರ್ಣಗೆಡ್ಡೆ, ಕೆಸು, ಪಪ್ಪಾಯ ಹೀಗೆ ವಿವಿಧ ತಳಿಯ ಗಿಡ ನೆಟ್ಟಿದ್ದಾರೆ. ಜನರ ಆಕ್ರೋಶ ಕಟ್ಟೆಯೊಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಮುಖ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ಜನರು ಗಿಡ ನೆಡುತ್ತಿದ್ದರೂ ಅಧಿಕಾರಗಳು ಫಸಲು ಬರಲು ಕಾಯುತ್ತಿರುವಂತೆ ಮೌನವಾಗಿದ್ದಾರೆ. ಮುಂದೆ ತರಕಾರಿ ಗಿಡನೆಟ್ಟು ಫಸಲು ತೆಗೆದರೂ ಆಶ್ಚರ್ಯವಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

