Site icon Suddi Belthangady

ಮಿಯಾರು ವನದುರ್ಗ ದೇವಸ್ಥಾನದ ಅನ್ನ ಛತ್ರಕ್ಕೆ ಅನುದಾನ ಒದಗಿಸುವಂತೆ ರಕ್ಷಿತ್ ಶಿವರಾಂ ಗೆ ಮನವಿ ಸಲ್ಲಿಸಿದ ಸಮಿತಿ ಸದಸ್ಯರು

ಬೆಳ್ತಂಗಡಿ: ಮಿಯಾರು ವನದುರ್ಗ ದೇವಸ್ಥಾನದ ಅನ್ನ ಛತ್ರಕ್ಕೆ ಅನುದಾನ ಒದಗಿಸುವಂತೆ ರಕ್ಷಿತ್ ಶಿವರಾಂ ಗೆ ಸಮಿತಿಯಿಂದ ಮನವಿ ಸಲ್ಲಿಸಿದರು. ನಿರ್ಮಾಣಕ್ಕೆ ಬೇಕಾದ ಧನಸಹಾಯ ಸರಕಾರದಿಂದ ಮತ್ತು ದಾನಿಗಳಿಂದ ಒದಗಿಸಿ ಕೊಡಬೇಕಾಗಿ ಮಾತು ಕತೆ ನಡೆಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ, ಕಾರ್ಯದರ್ಶಿ ಸಂತೋಷ ಕೆ.ಸಿ., ಕೋಶಾಧಿಕಾರಿ ಶಾಜು ಕೆ.ಆರ್. ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಉಪ ಕಾರ್ಯದರ್ಶಿ ಶುಭನಿತ ಯೋಗಿಶ್ ಗೌಡ ಮತ್ತು ಸದಸ್ಯರಾದ ಹರಿನಾಕ್ಷಿ ರಾಘವ ಪೂಜಾರಿ ಹಾಗೂ ನಾರಾಯಣ ನಾಯ್ಕ್ ಅವರು ಉಪಸ್ಥಿತರಿದ್ದರು. ರಕ್ಷಿತ್ ಶಿವರಾಮ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅನುದಾನ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ವ್ಯವಸ್ಥಾಪನ ಸಮಿತಿಯವರು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

Exit mobile version