




ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೊಂದಿಗೆ “ಜನರ ಬಳಿಗೆ ತಾಲೂಕು ಆಡಳಿತ” ಕಾಶಿಪಟ್ನಾ, ಅಂಡಿಂಜೆ, ಸುಲ್ಕೇರಿ, ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮವು ನ.18ರಂದು ಬೆಳಿಗ್ಗೆ ಕಾಶಿಪಟ್ನ ಗ್ರಾಮ ಪಂಚಾಯತ್ ಹಾಗೂ ಅಂಡಿಂಜೆ ಗ್ರಾಮ ಪಂಚಾಯತ್ ಮಧ್ಯಾಹ್ನ ನಂತರ ಸುಲ್ಕೇರಿ ಹಾಗೂ ಬಳಂಜ ಗ್ರಾಮ ಪಂಚಾಯತ್ನಲ್ಲಿ ನಡೆಯಲಿದೆ.









