ಕುತ್ಲೂರು: ಗುರು ನಾರಾಯಣ ಸೇವಾ ಸಂಘದ ವಠಾರದಲ್ಲಿ ಗುರು ಪೂಜಾ ಹಾಗೂ ಸಾರ್ವಜನಿಕ ಶನಿ ಪೂಜಾ ಕಾರ್ಯಕ್ರಮವು ನ.8ರಂದು ನಡೆಯಿತು. ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್, ಯುವ ಬಿಲ್ಲವ ವೇದಿಕೆಯ ಪ್ರಸಾದ್ ಎಮ್. ಕೆ., ವೇಣೂರು ಯುವ ವಾಹಿನಿ ಘಟಕದ ಅಧ್ಯಕ್ಷ ಶುಭಾಕರ ಪೂಜಾರಿ, ಗಣೇಶ್ ನಾರಾಯಣ ಪಂಡಿತ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗವಹಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಂಘದ ಅಧ್ಯಕ್ಷ ರೋಹನ್ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ರಾಜಶ್ರೀ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಡೀಕಯ್ಯ ಪೂಜಾರಿ ವಿರಾಬೆ, ಗ್ರಾಮಕ್ಕೆ ಉತ್ತಮ ಪ್ರವಾಸೋದ್ಯಮ ಹಳ್ಳಿ ರಾಷ್ಟ್ರ ಪ್ರಶಸ್ತಿ ಸಿಗಲು ಕಾರಣರಾದ ಹರೀಶ್ ಡಾಕಯ್ಯ ಪೂಜಾರಿ, ಸಂದೀಪ್ ಪೂಜಾರಿ, ಶಿವರಾಜ್ ಅಂಚನ್ ಹಾಗೂ ನಾರಾವಿ ಗ್ರಾಮ ಪಂಚಾಯಿತಿನಲ್ಲಿ 25 ವರ್ಷದಿಂದ ಸೇವೆ ಸಲ್ಲಿಸಿ, ಗ್ರಾಮ ಪಂಚಾಯಿತಿ ನೌಕರರ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಎಂ. ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸಲಹೆಗಾರರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸತೀಶ್ ಮಿತೊಟ್ಟು ಸ್ವಾಗತಿಸಿದರು. ಸತೀಶ್ ಸಮೃದ್ಧಿ ನಿರೂಪಿಸಿದರು. ರಾಜಶ್ರೀ ಧನ್ಯವಾದವಿತ್ತರು.

