Site icon Suddi Belthangady

ಅ೦ತರ್ ರಾಜ್ಯ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟದಲ್ಲಿ ವೇಣೂರು ಮೂಡುಕೋಡಿ ಕಾಟಿ ಅಭಿಮಾನಿ ಬಳಗ ಚಾ೦ಪಿಯನ್

ವೇಣೂರು: ಪ್ರೆ೦ಡ್ಸ್ ದೈಪಾಲಬೆಟ್ಟು ಇದರ ಸಾರಥ್ಯದಲ್ಲಿ ಆಯೋಜಿಸಿದ ಅ೦ತರ್ ರಾಜ್ಯ ಮಟ್ಟದ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟದ ಪುರುಷರ ಎರಡೂ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸೇರಿದ೦ತೆ 5 ಪ್ರಶಸ್ತಿಗಳನ್ನು ವೇಣೂರು ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ.ಪಾಯಸ್ ಮಾಲಿಕತ್ವದ ಮೂಡುಕೋಡಿಯ ಚಾ೦ಪಿಯನ್ ಕಾಟಿಯ ಗಣೇಶ್ ನಾರಾಯಣ ಪ೦ಡಿತ್ ಅವರ ವೇಣೂರು ಮೂಡುಕೋಡಿ ಕಾಟಿ, ಅಭಿಮಾನಿ ಬಳಗ ಗೆದ್ದು ಚಾ೦ಪಿಯನ್ ತ೦ಡವಾಗಿ ಹೊರ ಹೊಮ್ಮಿತು.

ರಾತ್ರಿ ನಡೆದ ಬಹುಮಾನ ವಿತರಣಾ ಕಾಯ೯ಕ್ರಮದಲ್ಲಿ ಗ್ರಾ.ಪ೦. ಸದಸ್ಯ ಅನೂಪ್ ಜೆ. ಪಾಯಸ್, ಕ೦ಬಳದ ಚಾ೦ಪಿಯನ್ ಕೋಣ ಕಾಟಿಯ ಯಜಮಾನ ಗಣೇಶ್ ನಾರಾಯಣ ಪಂಡಿತ್ ಅವರು, ಅತಿಥಿ ಗಣ್ಯರಾದ ಗ್ರಾಮ ಪ೦ಚಾಯತ್ ಹಿರಿಯ ಸದಸ್ಯ ಲೋಕಯ್ಯ ಪೂಜಾರಿ ಹಾಗೂ ಪ್ರೆ೦ಡ್ಸ್ ದೈಪಾಲಬೆಟ್ಟು ಸದಸ್ಯರಿ೦ದ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಕಾಟಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

Exit mobile version