ಬೆಳ್ತಂಗಡಿ: ದ್ವಿತೀಯ ಸಮೂಹ ಸಂಪನ್ಮೂಲ ಕೇಂದ್ರ ಗುರುವಾಯನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇವರ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿ 2025 ಕಾರ್ಯಕ್ರಮ ನಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಕ್ತೇಶ್ವರಿ ಪದವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. ಕಿರಿಯರ ವಿಭಾಗದ ಧಾರ್ಮಿಕ ಪಠಣ -ಸಂಸ್ಕೃತ- ಗೌತಮಿ ಕೆ. ಗೌಡ 4ನೇ ತರಗತಿ ಪ್ರಥಮ, ಕ್ಲೇ ಮೊಡೆಲಿಂಗ್- ಮನೀಷ್ ಕೆ. ಗೌಡ 3ನೇ ತರಗತಿ ಪ್ರಥಮ, ಕಥೆ ಹೇಳುವುದು -ಶಾರ್ವಿ ಕೆ. 4ನೇ ತರಗತಿ ಪ್ರಥಮ, ವರ್ಷ 4ನೇ ತರಗತಿ ಅಭಿನಯ ಗೀತೆ ತೃತೀಯ ಮತ್ತು ಆಶುಭಾಷಣ ತೃತೀಯ, ನಿಧಿ ಎಂ. 4ನೇ ತರಗತಿ ದೇಶ ಭಕ್ತಿ ಗೀತೆ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
ಹಿರಿಯ ವಿಭಾಗದ ವೀಕ್ಷಾ ಬಿ.ಕೆ. 5ನೇ ತರಗತಿ ಕಥೆ ಹೇಳುವಿಕೆಯಲ್ಲಿ ಪ್ರಥಮ ಮತ್ತು ಅಭಿನಯ ಗೀತೆಯಲ್ಲಿ ದ್ವಿತೀಯ, ಕೀರ್ತಿ 5ನೇ ತರಗತಿ ಕನ್ನಡ ಕಂಠ ಪಾಠದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಪ್ರಭಾ ಶ್ರೀಶಾಂ ಮತ್ತು ಸಹ ಶಿಕ್ಷಕಿ ಲಾವಣ್ಯ ಅವರು ಮಾರ್ಗದರ್ಶನ ನೀಡಿರುತ್ತಾರೆ. ಎಸ್.ಡಿ.ಎಮ್.ಸಿ. ಅಧ್ಯಕ್ಷ ಕೆ. ಕುಶಾಲಪ್ಪ ಗೌಡ ಹಾಗೂ ಎಸ್.ಡಿ.ಎಮ್.ಸಿ. ಪೋಷಕರು ಭಾಗವಹಿಸಿದ್ದರು.

