ಉಜಿರೆ: ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಮಂಗಳೂರಿನ ಶಕ್ತಿ ನಗರದಲ್ಲಿರುವ ದಕ್ಷಿಣ ಕನ್ನಡ ಫಿಲೇಟೆಲಿ ಮತ್ತು ನ್ಯೂಮಿಸ್ಮ್ಯಾಟಿಕ್ ಅಸೋಸಿಯೇಷನ್ (DKPANA) ಅವರು ಜಂಟಿಯಾಗಿ ನ.15ರಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ವಸ್ತು ಪ್ರದರ್ಶನದಲ್ಲಿ, ಹಳೇ ನಾಣ್ಯಗಳು, ಸ್ಟಾಂಪುಗಳು, ಅನೇಕ ಪುರಾತನ ವಸ್ತುಗಳು, ಅವುಗಳ ಜತೆಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹದ ಕೆಲವು ವಸ್ತುಗಳ ಪ್ರದರ್ಶನ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತ ಮಾಹಿತಿ ಸಿಗಲಿರುವ ಈ ವಸ್ತು ಪ್ರದರ್ಶನ, ಆ ದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯ ವರೇಗೆ ನಡೆಯಲಿರುವುದು.
ಆ ದಿನ ಬೆಳಿಗ್ಗೆ ಶ್ರೀ ಧ.ಮ. ಎಜುಕೇಷನಲ್ ಸೊಸೈಟಿಯ ಐಟಿ ವಿಭಾಗದ ಸಿ. ಇ.ಓ ಆಗಿರುವ ಶ್ರೀ ಪೂರಣ್ ವರ್ಮರವರು ವಸ್ತು ಪ್ರದರ್ಶನದ ಉದ್ಘಾಟನೆ ಮಾಡಲಿರುವರು. DKPANA ಅಧ್ಯಕ್ಷ ಮರ್ಕಡ್ ಪ್ರಭಾಕರ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿ ರೊ. ಡಾ. ಎಂ.ಎಂ ದಯಾಕರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಕಾರ್ಯಕ್ರಮದ ಸಂಚಾಲಕಿ ಡಾ. ವಿದ್ಯಾ ಶ್ರೀಹರಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

