Site icon Suddi Belthangady

ಸಹಾಯ ಹಸ್ತ- ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಮಾರಾಟ ಯೋಜನೆ

ಕನ್ಯಾಡಿ: ಶಿರಸಿಯಲ್ಲಿ ನ.8 ಮತ್ತು 9ರಂದು ಇನ್ನರ್ ವೀಲ್ ಕ್ಲಬ್ ಆಯೋಜಿಸಿದ ಸಂಪ್ರೀತಿ ಕಾರ್ಯಕ್ರಮದಲ್ಲಿ, ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ದಿವ್ಯಾಂಗರು ಸ್ವಯಂ ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು, ಗೊಂಬೆಗಳು ಸೇರಿದಂತೆ ಹಲವು ವಿಧದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.

ಈ ಮಳಿಗೆಯನ್ನು ಸೌಜನ್ಯ ತೆಲಂಗ ಅವರ ನೇತೃತ್ವದಲ್ಲಿ, ಶ್ರೀ ಕೃಷ್ಣರವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಆಯೋಜಿಸಲಾಯಿತು. ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಳಿಗೆಯ ಸಂಪೂರ್ಣ ನಿರ್ವಹಣೆಯನ್ನು ದಿವ್ಯಾಂಗರೇ ಮಾಡಿರುವುದು ವಿಶೇಷ.

ಕಾರ್ಯಕ್ರಮದ ಕೊನೆಯಲ್ಲಿ ಸುಮಾರು ₹19,000/- ಮೌಲ್ಯದ ವ್ಯಾಪಾರ ನಡೆದಿದ್ದು, ಇದು ಕಾರ್ಯಕ್ರಮದ ಯಶಸ್ಸಿನ ಮತ್ತು ದಿವ್ಯಾಂಗರ ಆತ್ಮವಿಶ್ವಾಸದ ಸ್ಪಷ್ಟ ಉದಾಹರಣೆಯಾಗಿದೆ.

Exit mobile version