ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2026 ಜನವರಿ 16ರಿಂದ 25ರವರೆಗೆ ನಡೆಯಲಿದೆ.
ಖಾಝಿ ಶೈಖುನಾ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ನೇತೃತ್ವದಲ್ಲಿ, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದೊಂದಿಗೆ ನಡೆಯುವ ಈ ಆಧ್ಯಾತ್ಮಿಕ ಅನುಭೂತಿಯ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಗೌರವಾಧ್ಯಕ್ಷ, ಸಮಸ್ತ ಕೇರಳ ಕೇಂದ್ರ ಮುಶಾವರ ಉಪಾಧ್ಯಕ್ಷ ಖುದುವತುಸ್ಸಾದಾತ್ ಅಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಪ್ರಕಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿದರು.
ಉರೂಸ್ ಕಾರ್ಯಕ್ರಮವು ಕಾಜೂರು ಮತ್ತು ಕಿಲ್ಲೂರು ಜಂಟಿ ಆಶ್ರಯದಲ್ಲಿ ಸಂಪ್ರದಾಯಬದ್ಧವಾಗಿ ಗತ ವೈಭವ ಮರುಕಳಿಸುವಂತೆ ವಿಜೃಂಬಣೆಯಿಂದ ನಡೆಯಲಿದೆ ಎಂದು ಸಯ್ಯಿದ್ ಕುಂಬೋಳ್ ತಂಙಳ್ ತಿಳಿಸಿದರು.
ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉರೂಸ್ ಸಮಿತಿ ಉಪಾಧ್ಯಕ್ಷ ಹಾಗೂ MJM ಕಿಲ್ಲೂರು ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಎಚ್ ಅಬೂಬಕ್ಕರ್ ಸಿದ್ದೀಕ್, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಅಹ್ಸನಿ, MJM ಕಿಲ್ಲೂರು ಮಸೀದಿ ಉಪಾಧ್ಯಕ್ಷ ಶಾಹುಲ್ ಹಮೀದ್, ಕಿಲ್ಲೂರು ಮಸೀದಿ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ, ಪ್ರಮುಖರಾದ ಮುಹಮ್ಮದ್ ಸಖಾಫಿ ಕಾಜೂರು, ಕೆ.ಯು. ಮುಹಮ್ಮದ್ ಹನೀಫ್ ಕಾಜೂರು, ಕೆ. ಮುಹಮ್ಮದ್ ಕಿಲ್ಲೂರು, ಬದ್ರುದ್ದೀನ್ ಕಿಲ್ಲೂರ್ ಮುಂತಾದವರು
ಉಪಸ್ಥಿತರಿದ್ದರು.

