Site icon Suddi Belthangady

ಕನ್ಯಾಡಿ: ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ- 2025

ಕನ್ಯಾಡಿ: ಸೇವಾಭಾರತಿ ಸಂಸ್ಥೆಯು ಕನ್ಯಾಡಿಯ ಸುಪ್ರಜ ಸಭಾಂಗಣ ಮತ್ತು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ನ.9ರಂದು ಆಯೋಜಿಸಿದಂತಹ ದೀಪಾವಳಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಗಣ್ಯರನ್ನು ಒಗ್ಗೂಡಿಸಿ ಇವರೆಗೆ ನಡೆದು ಬಂದಂತಹ ದಾರಿಗಳು ಮತ್ತು ಸಂಸ್ಥೆಯ ಸೇವಾಕಾರ್ಯಗಳ ವಿಸ್ತಾರಗಳ ಬಗ್ಗೆ ವರದಿಯನ್ನು ನೀಡಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಇದರ ವಿಸ್ತಾರದ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಲಾಯಿತು.

ಡಾ. ಎಲ್ ಎಚ್ ಮಂಜುನಾಥ್, ಪುರಂದರ್ ರಾವ್, ಮನೋರಮ ಭಟ್, ಭುಜಬಲಿ ಧರ್ಮಸ್ಥಳ ಸಹಿತ ಗಣ್ಯರು ಭಾಗವಹಿಸಿದ್ದರು. ಸಂಸ್ಥೆಯ ಬಗ್ಗೆ ಮತ್ತು ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ವಿವರವನ್ನು ಕೆ. ವಿನಾಯಕ ರಾವ್ ಅವರು ಪ್ರಸ್ತಾಪಿಸಿದರು. ಸಂಸ್ಥೆಯ ಸೇವಾಕಾರ್ಯಗಳ ಬಗ್ಗೆ ಚರಣ್ ಕುಮಾರ್ ಎಂ. ಅವರು ವಿವರವಿತ್ತರು. ಪಂಚಪರಿವರ್ತನೆಯ ಬಗ್ಗೆ ಚಂದ್ರಶೇಖರ್ ಅವರು ತಿಳಿಸಿದರು.

Exit mobile version