Site icon Suddi Belthangady

ನೂತನ ಡಿ.ವೈ.ಎಸ್‌.ಪಿ ಅವರನ್ನು ಭೇಟಿ ಮಾಡಿ ತಾಲೂಕಿಗೆ ಸ್ವಾಗತಿಸಿದ ಮುಸ್ಲಿಂ ಒಕ್ಕೂಟದ ಮುಖಂಡರು

ಬೆಳ್ತಂಗಡಿ: ಉಪ್ಪಿನಂಗಡಿ,‌ ಕಡಬ ಸರ್ಕಲ್ ಸೇರಿದಂತೆ ಬೆಳ್ತಂಗಡಿ ತಾಲೂಕಿನ 5 ಠಾಣೆಗಳ ವಿಶಾಲ ವ್ಯಾಪ್ತಿಯುಳ್ಳ ಬೆಳ್ತಂಗಡಿ ಪೊಲೀಸ್ ಉಪವಿಭಾಗ ಇದರ ಪ್ರಥಮ ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿರುವ ಸಿ.ಕೆ. ರೋಹಿಣಿ (ಕೆಎಸ್‌ಪಿಎಸ್)ಅವರನ್ನು ನ.11ರಂದು ತಾಲೂಕಿನ ಮುಸ್ಲಿಂ ಒಕ್ಕೂಟದಿಂದ ಮುಖಂಡರು ಭೇಟಿ ಮಾಡಿ ತಾಲೂಕಿಗೆ ಸ್ವಾಗತಿಸಿದರು.

ತಾ.ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್, ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಖಾಲಿದ್ ಪುಲಾಬೆ, ಅಬ್ದುಲ್ ರಹಿಮಾನ್ ಪಡ್ಪು, ನಿಸಾರ್ ಕುದ್ರಡ್ಕ, ನವಾಝ್ ಶರೀಫ್ ಪೆರಾಲ್ದರಕಟ್ಟೆ, ಅಝರ್ ನಾವೂರು, ಅಬ್ಬೋನು ಮದ್ದಡ್ಕ, ಕೆ.ಎಸ್. ಅಬ್ದುಲ್ಲ ಕರಾಯ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್ ಕಟ್ಟೆ, ಸಾಲಿಹ್ ಮದ್ದಡ್ಕ ಮೊದಲಾದವರು ಉಪಸ್ಥಿತರಿದ್ದರು. ಹೂಗುಚ್ಚ ನೀಡಿ ಅವರನ್ನು ಬರಮಾಡಿಕೊಳ್ಳಲಾಯಿತು.

Exit mobile version