Site icon Suddi Belthangady

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರ 2025-26 ಕುಕ್ಕೇಡಿ(ಬುಲೇಕರ್) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಯಾಯಿತು.

‘ಡಿಜಿಟಲ್ ಸಾಕ್ಷರತೆಗೆ ಯುವಜನತೆ’ ‘ನನ್ನ ಭಾರತಕ್ಕಾಗಿ ಯುವಜನತೆ’ ಎಂಬ ಧ್ಯೇಯ ವಾಕ್ಯದಡಿ ಏಳು ದಿನಗಳ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವನ್ನು ಕುಕ್ಕೇಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಅನಿತಾ ಕೆ. ಅವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಹಾಗೂ ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಹಬಾಳ್ವೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಆತಿಥ್ಯ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಅವರು ತಮ್ಮ ಭಾಷಣದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮತ್ತು ಸಮಾಜ ಸೇವಾ ಮನೋಭಾವ ಬೆಳೆಸುವ ವೇದಿಕೆ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಪ್ರೊ. ಸುರೇಶ್ ವಿ. ಅವರು ಶಿಬಿರದ ಉzಶವನ್ನು ವಿವರಿಸಿದರು. ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಸಹಕಾರ, ಹೊಣೆಗಾರಿಕೆ, ಮತ್ತು ಸಹಬಾಳ್ವೆಯಂತಹ ಮೌಲ್ಯಗಳು ರೂಢಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾ.ಪಂ. ಸದಸ್ಯ ಗೋಪಾಲ್ ಶೆಟ್ಟಿ, ಕೃಷ್ಣಪ್ಪ ಉಜ್ಜಾಲ್, ನಿಟ್ಟಡೆ ಕ್ಲಸ್ಟರ್ ಸಿ.ಆರ್.ಪಿ ಆರತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ ಬರ್ನಾತ್ಯಾರ್, ಸ್ಯಾಕ್ಸೋಫೋನ್ ವಾದಕ ಬೇಬೇಂದ್ರ ಪೂಜಾರಿ, ಹರ್ಷವರ್ಧನ್ ಉಪಸ್ಥಿತರಿದ್ದು ಶುಭಕೋರಿದರು. ರಾಷ್ಟ್ರೀಯ ಸೇವಾ ಘಟಕ -1ರ ಯೋಜನಾಧಿಕಾರಿ ಪ್ರೊ. ರೊನಾಲ್ಟ್ ಪ್ರವೀಣ್ ಕೊರೆಯ ಅವರು ಪ್ರಸ್ತಾವಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ -2ರ ಅಧಿಕಾರಿ ಪ್ರೊ. ಕವಿತ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ನವೀನ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪವಿತ್ರ ಮತ್ತು ಬಳಗ ಪ್ರಾರ್ಥಿಸಿದರು. ತೇಜಸ್ವಿನಿ ದ್ವಿತೀಯ ಬಿ.ಬಿ.ಎ ಸ್ವಾಗತಿಸಿದರು. ಆಶಿಕಾ ದ್ವಿತೀಯ ಬಿ.ಎ. ನಿರೂಪಿಸಿದರು. ಕ್ರಿತಿಕ್ ದ್ವಿತೀಯ ಬಿ.ಎ ಧನ್ಯವಾದ ಪ್ರಸ್ತಾವನೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

Exit mobile version