Site icon Suddi Belthangady

ಮುಂಡಾಜೆ: ದೇವಸ್ಥಾನದ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಮುಂಡಾಜೆಯ ಸನ್ಯಾಸಿ ಕಟ್ಟೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ನ.11ರಂದು ಜರಗಿತು. ಶ್ರೀ ಪರಶುರಾಮ, ಸಿದ್ಧಿವಿನಾಯಕ, ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಸೇವೆಗಳು, ಆಹ್ವಾನಿತ ಭಜನಾ ತಂಡಗಳಿಂದ ಭಜನೆ, ದೇವರಿಗೆ ಕೃಷಿ ಉತ್ಪನ್ನಗಳ ಸಹಿತ ರಾಶಿ ಪೂಜೆ, ನಾಗತಂಬಿಲ, ಕ್ಷೇತ್ರದ ಪರಿವಾರ ದೈವಗಳಿಗೆ ಪರ್ವ ಸೇವೆ, ಮಹಾಪೂಜೆ ನಡೆಯಿತು.

ರಾತ್ರಿ ಶ್ರೀ ದೇವರ ಉತ್ಸವ, ಸವಾರಿ ಕಟ್ಟೆ, ವಸಂತ ಕಟ್ಟೆ ಪೂಜೆಗಳು, ಅಷ್ಟಾವಧಾನ ಸೇವೆಗಳು, ಸುಡುಮದ್ದು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಆಡಳಿತ ಮಂಡಳಿ ಹಾಗೂ ಜಾತ್ರೋತ್ಸವ ಸಮಿತಿಯ ಸದಸ್ಯರು ಸಹಕರಿಸಿದರು.

Exit mobile version