ಕೊಯ್ಯೂರು: ಗ್ರಾಮದ ಬೆರ್ಕೆ ನಿವಾಸಿ ಪ್ರಗತಿಪರ ಕೃಷಿಕ ಚಂದಪ್ಪ ಗೌಡ ಬೆರ್ಕೆ (56 ವರ್ಷ)ನ.10 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪ್ರಗತಿ ಪರ ಕೃಷಿಕರು, ಬಜಿಲ ಹರ್ಷ ಗೆಳೆಯರ ಬಳಗದ ಅಧ್ಯಕ್ಷರಾಗಿ, ದೆಂತ್ಯಾರು ಬ್ರಹ್ಮ ಕಲಶೋತ್ಸವ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರು, ಉಮಿಯ ಬೈಲುಗಳ ಬೈಲುವಾರು ಸಮಿತಿಯ ಅಧ್ಯಕ್ಷರಾಗಿ, ಅದೂರು ಪೆರಾಲು ಸ.ಕಿ.ಪ್ರಾ. ಶಾಲೆಯ ವಜ್ರ ಮಹೋತ್ಸವ ಸಮಿತಿ ಕೋಶಾಧಿಕಾರಿಯಾಗಿದ್ದರು. ಮೃತರು ಪತ್ನಿ ಗೀತಾ, ಇಬ್ಬರು ಹೆಣ್ಣು, ಓರ್ವ ಗಂಡು ಮಕ್ಕಳು ಹಾಗೂ ಬಂಧು-ಬಳಗವನ್ನು ಅಗಲಿದ್ಧಾರೆ.
ಪ್ರಗತಿಪರ ಕೃಷಿಕ ಬೆರ್ಕೆ ಚಂದಪ್ಪ ಗೌಡ ನಿಧನ

