Site icon Suddi Belthangady

ಬೆಳ್ತಂಗಡಿ: ತಾಲೂಕಿನ ಪ್ರವಾಸಿ ತಾಣ ಪ್ರವೇಶಕ್ಕೆ ನಿಷೇಧ-ಗಡಾಯಿಕಲ್ಲು ಪ್ರವೇಶಕ್ಕೆ ಅನುಮತಿ

ಬೆಳ್ತಂಗಡಿ: ವನ್ಯಜೀವಿ ವಲಯದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಾರಾವಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಆನೆಗಳ ಸಂಚಾರ ಇದ್ದು ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸೋದ್ಯಮ ಸ್ಥಳಗಳಾದ ಕಡಮಗುಂಡಿ (ದಿಡುಪೆ) ಮತ್ತು ಬೊಳ್ಳೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂದರ್ಶನವನ್ನು ನಿಷೇಧಿಸಲಾಗಿದೆ.

ಕಡಮಗುಂಡಿ (ದಿಡುಪೆ) ಮತ್ತು ಬೊಳ್ಳೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂದರ್ಶನವನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಪ್ರವಾಸಿ ತಾಣವಾದ ಗಡಾಯಿಕಲ್ಲು ಎಂಬಲ್ಲಿಗೆ ನ. 9ರಂದು ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗಿದೆ.
ಮಕ್ಕಳಿಗೆ 25 ರೂ., ವಯಸ್ಕರಿಗೆ 50 ರೂ. ಪ್ರವೇಶ ಶುಲ್ಕವಾಗಿದೆ.

Exit mobile version