Site icon Suddi Belthangady

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಪ್ರೌಢ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ಉಜಿರೆ: ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 8ರಂದು ನಡೆದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಬೆಳ್ತಂಗಡಿ SDM ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಶ್ರೀ ರಕ್ಷಾ 9ನೇ ಜಾನಪದ ಗೀತೆ ಪ್ರಥಮ, ಪ್ರಾಪ್ತಿ ವಿ ಶೆಟ್ಟಿ 9ನೇ ಭರತನಾಟ್ಯ ಪ್ರಥಮ, ಬೃಂದಾ ಎಸ್ 9ನೇ ಚಿತ್ರಕಲೆ ಪ್ರಥಮ, ಯಶ್ವಿತಾ 10ನೇ ಗಝಲ್ ಪ್ರಥಮ, ಜಾನಪದ ನೃತ್ಯ ಪ್ರಥಮ (ಪೂರ್ವಿ ,ತೇಜಸ್ ರಿದು,ಶ್ರೀರಕ್ಷಾ, ಪ್ರಾಪ್ತಿ, ಸಂಜನಾ) ಕವ್ವಾಲಿ ಪ್ರಥಮ (ಅನಘ ಮರಾಠೆ, ಶ್ರೀ ನಂದನ್, ನಿದೀಶ್, ಸಹನಾ, ರಿಷಿತ ,ಶ್ರೇಯಸ್ )

ಧಾರ್ಮಿಕ ಪಠಣ ಸಂಸ್ಕೃತ ಅನಘ ಮರಾಠೆ 10ನೇ ದ್ವಿತೀಯ, ಧಾರ್ಮಿಕ ಪಠಣ ಅರೇಬಿಕ್ ಅಮನ್ ಶೇಕ್ 10ನೇ ದ್ವಿತೀಯ, ಹಿಂದಿ ಭಾಷಣ ರಿತಿಕಾ 9ನೇ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಅವರಿಗೆ ಶಾಲಾ ಶಿಕ್ಷಕಿಯರಾದ ಗೀತಾ, ಕಾರುಣ್ಯ(ಜನಪದ ನೃತ್ಯ), ಮೆನಿತಾ(ಗಝಲ್ ಮತ್ತು ಹಿಂದಿ ಭಾಷಣ), ಸುಮಲತಾ(ಕವ್ವಾಲಿ), ಅಮಿತ(ಗಝಲ್), ರಮ್ಯ (ಜಾನಪದ ಗೀತೆ), ಸಹನ (ಭರತನಾಟ್ಯ) ಸ್ವಾತಿ (ಸಂಸ್ಕೃತ ಪಠಣ), ಮಂಜುನಾಥ್ (ಅರೇಬಿಕ್ ಪಠಣ), ಜಯರಾಮ್ (ಚಿತ್ರಕಲೆ) ತರಬೇತಿ ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಹೇಮಲತ ಪ್ರೋತ್ಸಾಹಿಸಿರುತ್ತಾರೆ.

Exit mobile version