Site icon Suddi Belthangady

ಪಟ್ಟೂರಿನಲ್ಲಿ ಪೊಲೀಸರು ಜಪ್ತಿ ಮಾಡಿದ ಮನೆಗೆ ತಾಲೂಕು ಮುಸ್ಲಿಂ ಮುಖಂಡರ ಭೇಟಿ

ಬೆಳ್ತಂಗಡಿ: ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಗೋವಧೆಯ ಹೆಸರಿನಲ್ಲಿ ಅಕ್ರಮವಾಗಿ ಮಹಿಳೆ ಝೊಹರಾ ಅವರ ಮನೆಗೆ ತಾಲೂಕಿನ ಮುಸ್ಲಿಂ ಮುಖಂಡರ ನಿಯೋಗ ನ.8ರಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಘಟನೆಯ ವಿವರ ಪಡೆದ ನಿಯೋಗ, ಈ‌ ಬಗ್ಗೆ ನಾವು ಪೊಲೀಸ್ ಮೇಲಧಿಕಾರಿಗಳ ಜೊತೆ ಮಾತುಕತೆ ಮಾಡಿ ಇಂತಹಾ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಬಗ್ಗೆ ನಿಯೋಗ ಭೇಟಿ ನೀಡುವ ಬಗ್ಗೆ ಆದ ಮಿರ್ಣಯಗಳನ್ನು ತಿಳಿಸಲಾಯಿತು. ಹಾಗೂ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಾಯಿತು. ಪುತ್ತೂರು‌ ಸಹಾಯಕ ಆಯುಕ್ತರ ಆದೇಶದಂತೆ ಮನೆ ಜಪ್ತಿ‌ ತೆರವಿಗೆ ಬಂದ ಪೊಲೀಸ್ ಅಧಿಕಾರಿಗಳ ಜೊತೆಯೂ ಮಾತುಕತೆ ನಡೆಸಲಾಯಿತು.

ನಿಯೋಗದಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಸಲೀಂ ಸುನ್ನತ್‌ಕೆರೆ, ಅಶ್ರಫ್ ಆಲಿಕುಂಞ ಮುಂಡಾಜೆ, ಕೆರೀಂ ಗೇರುಕಟ್ಟೆ, ಕೆ.ಎಸ್ ಅಬ್ದುಲ್ಲ ಕರಾಯ, ಲೆತೀಫ್ ಹಾಜಿ ಗುರುವಾಯನಕೆರೆ, ಮುಸ್ತಫ ಗುರುವಾಯನಕೆರೆ, ನಿಸಾರ್ ಕುದ್ರಡ್ಕ, ರಮೀಝ್ ಬೆಳ್ತಂಗಡಿ, ಉಮರ್ ಜಿ.ಕೆ, ಶಮೀಮ್ ಯೂಸುಫ್ ಮದ್ದಡ್ಕ, ಹನೀಫ್ ಪುಂಜಾಲಕಟ್ಟೆ, ಅಬ್ದುಲ್ ರಹಿಮಾನ್ ಪಡ್ಪು, ಸಾಲಿಹ್ ಮದ್ದಡ್ಕ ಉಪಸ್ಥಿತರಿದ್ದರು.

Exit mobile version