Site icon Suddi Belthangady

ಶಿವಾಜಿನಗರ ಶ್ರೀ ಮಹಾಮ್ಮಾಯಿ ದೇವಸ್ಥಾನದ ಟ್ರಸ್ಟಿ ಸುಶೀಲಾ ಮೈಪಾಜೆ ನಿಧನ

ಕಣಿಯೂರು: ಶಿವಾಜಿನಗರ ಶ್ರೀ ಮಹಾಮ್ಮಾಯಿ ದೇವಸ್ಥಾನದ ಟ್ರಸ್ಟಿ ಆಗಿರುವ ಸುಶೀಲಾ ಮೈಪಾಜೆ (60 ವ) ಅವರು ನ.7ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅವರು ಮಹಮ್ಮಾಯಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮಕ್ಕಳಿಂದ ಹಿರಿಯರವರೆಗೆ ಎಲ್ಲರ ಪ್ರೀತಿಗೆ ಪಾತ್ರರಾಗಿ, ಅನೇಕ ಜನರ ಜೀವನಕ್ಕೆ ಮಾರ್ಗದರ್ಶಕರಾಗಿದ್ದರು. ಮೃತರು ಪತಿ ಬಾಬು ನಾಯ್ಕ, ಮಕ್ಕಳಾದ ಶಿವಾನಂದ, ದಿನೇಶ್, ಆನಂದ ಮತ್ತು ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version