Site icon Suddi Belthangady

ಕೊಕ್ಕಡ: ಬೈಕ್ ಕಳವು-ಪ್ರಕರಣ‌ ದಾಖಲು

ಬೆಳ್ತಂಗಡಿ: ಕೊಕ್ಕಡದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಆಲಂಕಾರು ನಿವಾಸಿ ಶಿವಪ್ರಸಾದ್ ಎಂಬವರು ನ.6ರಂದು ಬೆಳಗ್ಗೆ ತನ್ನ ಬೈಕ್ ಕೆ ಎ 19 EH 7942 ಅನ್ನು ಕೊಕ್ಕಡ ಪೇಟೆಯಲ್ಲಿ ಅಂಗಡಿಯೊಂದರ ಆವರಣದಲ್ಲಿ ನಿಲ್ಲಿಸಿ ಉಜಿರೆಗೆ ತೆರಳಿದ್ದರು. ಸಂಜೆ ಹಿಂತಿರುಗಿ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಬೈಕ್ ಕಳ್ಳತನವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ಕಳವಾದ ಬೈಕ್ ನ ಮೌಲ್ಯ ರೂ. 20,000 ಎಂದು ಅಂದಾಜಿಸಲಾಗಿದ್ದು, ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ 303(2)ಬಿಎನ್.ಎಸ್. ನಂತೆ ಪ್ರಕರಣ‌ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version