ಬೆಳ್ತಂಗಡಿ: ಅರುವ ನಮ ಮಾತೆರ್ಲ ಒಂಜೇ ಕಲಾತಂಡದ ಸದಸ್ಯರ “ಸುರಕ್ಷೆಗಾಗಿ” ಪ್ರಾರಂಭಿಸಿದ ತಂಡ. ನಿಧಿಯ ಸದಸ್ಯರಾದ, ಬಾಲಕೃಷ್ಣ ಮೂಲ್ಯ ಸುಲ್ಕೇರಿ, ಉಜಿರೆ ಆಕ್ಸಿಡೆಂಟ್ ನಿಂದ ಬೆನಕ ಹಾಸ್ಪಿಟಲ್, ಹಾಗೂ ವರದರಾಜ್ ಪೂಜಾರಿ ಬಳೆಂಜ, ಅನಾರೋಗ್ಯದಿಂದ ಮಂಗಳೂರು ಹಾಸ್ಪಿಟಲ್ ನಲ್ಲಿ ದಾಖಲಾಗಿರುವುದರಿಂದ ಅವರಿಗೆ ತಂಡದಿಂದ ತಲಾ ಒಬ್ಬರಿಗೆ 20,000 ರೂ. ನಂತೆ, ಆರ್ಥಿಕ ಸಹಕಾರವನ್ನು ತಂಡದಿಂದ ಅಳದಂಗಡಿ ಸತ್ಯದೇವತೆ ಸನ್ನಿಧಾನದಲ್ಲಿ ನೀಡಲಾಯಿತು.
ನಮ ಮಾತೆರ್ಲ ಒಂಜೇ ಕಲಾತಂಡದ ಗೌರವ ಅಧ್ಯಕ್ಷ ಎನ್.ಎಮ್. ತುಳುಪುಳೆ ಅಳದಂಗಡಿ, ಸತ್ಯದೇವತೆಯ ಆಡಳಿತ ಮೋಕ್ತೆಸ ಶಿವಪ್ರಸಾದ್ ಅಜಿಲರು, ದರ್ಶನ್ ಶೆಟ್ಟಿ ಅರುವ, ರಾಮಚಂದ್ರಗೊಲ್ಲ ಪಿಲ್ಯ, ಜನಾರ್ಧನ ಕೊಡಂಗೆ, ಶ್ರೀಧರ ಎಮ್. ಕರಂಬಾರು, ಗಿರೀಶ್ ಕುಲಾಲ್ ನಾವರ, ರಾಕೇಶ್ ಪೂಜಾರಿ ಪಿಲ್ಯ, ಸುರೇಂದ್ರ ಸುಲ್ಕೇರಿ, ಹಿತೇಶ್ ಬೇಕಲ್, ರಮೇಶ್ ಸುವರ್ಣ ಅರುವ ಉಪಸ್ಥಿತರಿದ್ದರು.

