Site icon Suddi Belthangady

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಹಾಗೂ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಜಂಟಿ ಆಯೋಜಕತ್ವದಲ್ಲಿ ದಿ | ಎಂ. ಜಿ. ಶೆಟ್ಟಿ ಅವರಿಗೆ ನುಡಿನಮನ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ, ಗುರುವಾಯನಕೆರೆಯ ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಿ | ಎಂ.ಜಿ. ಶೆಟ್ಟಿ ಅವರಿಗೆ ಬಂಟರ ಭವನದ ಅರುವಗುತ್ತು ಕೆ. ನಾರಾಯಣ ರೈ ವೇದಿಕೆಯಲ್ಲಿ ನ. 8ರಂದು ನುಡಿನಮನ ಸಲ್ಲಿಸಲಾಯಿತು. ಬಂಟರ ಯಾನೆ ನಾಡವರ ಸಂಘ ಹಾಗೂ ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ, ವತಿಯಿಂದ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಜಯರಾಮ್ ಶೆಟ್ಟಿ ಪಡಂಗಡಿ, ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ನಿರ್ದೇಶಕ ಜಯರಾಮ್ ಎಂ. ಭಂಡಾರಿ ಧರ್ಮಸ್ಥಳ, ಬಂಟರ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ದುರ್ಗಾ, ಮಾಜಿ ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ ಕುತ್ಯಾರ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಘುರಾಮ್ ಶೆಟ್ಟಿ ಸಾಧನ ನುಡಿನಮನ ಸಲ್ಲಿಸಿದರು.

ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಪಾಧ್ಯಕ್ಷನವೀನ್ ಸಾಮಾನಿ ಕರಂಬಾರುಬೀಡು, ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸಿಐಓ ಸುಜಯ್ ಶೆಟ್ಟಿ, ನಿರ್ದೇಶಕ ಮಂಜುನಾಥ್ ರೈ, ವಿಜಯ ಶೆಟ್ಟಿ, ಉಜಿರೆ ಬಂಟರ ವಲಯದ ಅಧ್ಯಕ್ಷೆ ವನಿತಾ ಶೆಟ್ಟಿ, ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸಿಬ್ಬಂದಿ ವರ್ಗ, ಎಂ.ಜಿ. ಶೆಟ್ಟಿ ಅಭಿಮಾನಿ ಬಳಗ ಉಪಸ್ಥಿತರಿದ್ದರು.

ಬಂಟರ ಸಂಘದ ಕೋಶಾಧಿಕಾರಿ ವಸಂತ್ ಶೆಟ್ಟಿ, ಶ್ರದ್ಧಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version