Site icon Suddi Belthangady

ಎಸ್‌.ಸಿ.ಡಿ.ಸಿ.ಸಿ ಬೆಳ್ತಂಗಡಿ ಶಾಖೆಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಸ್ವ-ಸಹಾಯ ಗುಂಪು ಮತ್ತು ಜಂಟಿ ಭದ್ರತಾ ಗುಂಪುಗಳಿಗೆ ಸಾಲ ಸಂಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರು ಸಹಕಾರಿ ಬ್ಯಾಂಕ್ ನ ಬೆಳ್ತಂಗಡಿ ಶಾಖೆಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಸ್ವ-ಸಹಾಯ ಗುಂಪು ಮತ್ತು ಜಂಟಿ ಭದ್ರತಾ ಗುಂಪುಗಳಿಗೆ ಸಾಲ ಸಂಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಸಭಾಂಗಣದಲ್ಲಿ ನ.7ರಂದು ಆಯೋಜಿಸಲಾಯಿತು.

ನಬಾರ್ಡ್ ನ ಡಿ.ಡಿ.ಎಂ ಸಂಗೀತ ಕರ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಬಾರ್ಡ್ ನ ಬಗ್ಗೆ, ಸರಕಾರದ ಯೋಜನೆಯ ಬಗ್ಗೆ ಹಾಗೂ ಗುಂಪುಗಳಿಗೆ ದೊರೆಯುವ ಸರಕಾರದ ಬಡ್ಡಿ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಶಾಖೆಯ ನೋಡಲ್ ಅಧಿಕಾರಿ ಪದ್ಮನಾಭ ಅವರು ಗುಂಪಿನ ಬಗ್ಗೆ ಮಾಹಿತಿ ನೀಡಿದರು. ನಬಾರ್ಡ್ ನ ಸಹಯೋಗದೊಂದಿಗೆ ನವೋದಯ ಸ್ವಸಹಾಯ ಗುಂಪು ಹಾಗೂ ಜಂಟಿ ಭದ್ರತಾ ಗುಂಪುಗಳಿಗೆ ಸಾಲ ಸಂಯೋಜನೆಯ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಎಫ್‌.ಎಲ್‌.ಸಿ. ಉಷಾ ವಿ. ಕಾಮತ್ ಅವರು ಗುಂಪಿನ ಸದಸ್ಯರಿಗೆ ಸಂಘದ ಸಾಲ ವಿನಿಮಯದ ಬಗ್ಗೆ, ಗುಂಪುಗಳನ್ನು ನಡೆಸಿಕೊಂಡು ಹೋಗುವ ರೀತಿಯ ಬಗ್ಗೆ, ಸಾಲ ಪಡೆಯುವುದು ಹಾಗೂ ಅದರ ಮರುಪಾವತಿ ಯಾವ ರೀತಿ ಮಾಡುವುದು ಮತ್ತು ಸರ್ಕಾರದ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಹಾಗೂ ಪಿ.ಎಂ.ಜೆ.ವೈ., ಪಿ.ಎಂ.ಎಸ್‌.ಬಿ.ವೈ., ಎ.ಪಿ.ವೈ ಇನ್ಶೂರೆನ್ಸ್ ಗಳ ಬಗ್ಗೆ ಮಾಹಿತಿ ನೀಡಿದರು. ಡಿ.ಜಿ.ಎಮ್. ವಿದ್ಯಾ ಕಾರ್ನಾಡ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಹಾಗೂ ಸುದರ್ಶನ್ ಮತ್ತು ಜಿಲ್ಲಾ ನವೋದಯ ಮೇಲ್ವಿಚಾರಕ ರಂಜಿತ್, ನವೋದಯ ವಲಯ ಮೇಲ್ವಿಚಾರಕಿ ಜಯಂತಿ ಅವರು ಉಪಸ್ಥಿತರಿದ್ದರು. ಸ್ನೇಹ ನಿಧಿ ನವೋದಯ ಗುಂಪಿನ ಸದಸ್ಯೆ ಚಂದ್ರಾವತಿ ಅವರು ಪ್ರಾರ್ಥಿಸಿದರು. ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಸುಧೀರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬ್ಯಾಂಕ್ ಸಿಬ್ಬಂದಿ ರಾಮ್ ಆರ್. ರವರು ನೆರವೇರಿಸಿದರು. ನವೋದಯ ತಾಲೂಕು ಮೇಲ್ವಿಚಾರಕ ಸ್ಟೇನ್ಲಿ ಪಿಂಟೋ ಅವರು ಧನ್ಯವಾದ ನೀಡಿದರು.

Exit mobile version