ಹತ್ಯಡ್ಕ: ಮುದ್ದಿಗೆ ನಿವಾಸಿ ಕಮರೇಶ್ ತೋಟಕ್ಕೆ ಆನೆ ನ.6ರಂದು ತಡ ರಾತ್ರಿ ದಾಳಿ ನಡೆಸಿದ್ದು ಅಡಿಕೆ, ಬಾಳೆ ಗಿಡ, ತೆಂಗು ಸಹಿತ ಅನೇಕ ಕೃಷಿ ಪರಿಕರಗಳನ್ನು ನಾಶ ಪಡಿಸಿದೆ. ಇತ್ತೀಚಿಗೆ ಬೆಳ್ತಂಗಡಿ ತಾಲೂಕಿನ ಹಲವೆಡೆ ದಿನ ನಿತ್ಯ ಕಾಡಾನೆ ದಾಳಿಯದ್ದೆ ಸುದ್ದಿ ನಿತ್ಯ.
ಹಲವರ ತೋಟದ ಕೃಷಿ ನಾಶವಾಗುತ್ತಿದ್ದೂ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

