ನಾವೂರು: ಗ್ರಾಮ ಪಂಚಾಯತ್ ನ ಮಹಾತ್ಮಗಾಂಧಿ ರಾಷ್ಷೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನಗಳ 2024-25ನೇ ಸಾಲಿನ ಸಾಮಾಜಿಕ ಪರಿಶೋಧನೆ ಬಗ್ಗೆ ವಿಶೇಷ ಗ್ರಾಮ ಸಭೆಯು ನ.7ರಂದು ಪೂರ್ವಾಹ್ನ 10.30 ಗಂಟೆಗೆ ಸರಿಯಾಗಿ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಾವೂರು ಸರಕಾರಿ ಪ್ರೌಢ ಶಾಲೆಯ ಮುಖೋಪಾಧ್ಯಾಯ ರಾಜೇಂದ್ರ ಎಮ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಗಣೇಶ್ ಗೌಡ, ಹರೀಶ್ ಸಾಲಿಯಾನ್, ವೇದಾವತಿ, ಶಾಂತಿ, ಎನ್. ಕೆ. ಹಸೈನಾರ್, ರಾಜೀವ್ ಸಾಲಿಯಾನ್, ತಾಲೂಕು ಕಾರ್ಯಕ್ರಮ ವ್ಯವಸ್ಧಾಪಕ, ಬೆಳ್ತಂಗಡಿ ಸಾಮಾಜಿಕ ಪರಿಶೋಧನೆ ಹಾಗೂ ಸಾಮಾಜಿಕ ಪರಿಶೋಧನಾ ತಂಡದ ಸಿಬ್ಬಂದಿ ವರ್ಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಜೆ., ತಾಂತ್ರಿಕ ಸಹಾಯಕ ಅಭಿಯಂತರು ರೇಷ್ಮಾ, ತೃಪ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ದರು ಉಪಸ್ಧಿತರಿದ್ದರು. ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಎಲ್ಲರನ್ನು ಸ್ವಾಗತಿಸಿ, ಧನ್ಯವಾದವಿತ್ತರು.

