Site icon Suddi Belthangady

ಮದ್ದಡ್ಕ: ತಾಯಿ ರಕ್ತೇಶ್ವರಿ ಹಾಗೂ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ

ಕುವೆಟ್ಟು: ಶತಮಾನಗಳಿoತಲೂ ಹಿoದಿನ ಪ್ರಸಿದ್ಧ ಕಾರಣಿಕ‌ದ ದೈವ ಮದ್ದಡ್ಕ ತಾಯಿ ರಕ್ತೇಶ್ವರಿ ದೈವ ಹಾಗೂ ಪಿಲಿಚಾಮುಂಡಿ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ನ. 7ರoದು ಶಿಲಾನ್ಯಾಸ ಕಾರ್ಯಕ್ರಮ ಅಸ್ರಣ್ಣರು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಂ. ರಘುರಾಮ್ ಭಟ್ ಮಠ ಅವರ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಭಟ್ ಮಠ, ದೈವಸ್ಥಾನದ ಅನುವoಶಿಕ ಆಡಳಿತ ಮೊಕ್ತೇಸ್ತರ ಮೋಹನ್ ಕೆರ್ಮುಣ್ಣಾಯ ಮೈರಾರು, ಶ್ರೀನಿವಾಸ ಅಮ್ಮಣ್ಣಾಯ ಅಸ್ರಣ್ಣರು ಮೂಡುಮನೆ, ಮoಗಳೂರು ಮುಗ್ರೋಡಿ‌ ಕನ್ಸೆಕ್ಶನ್ ಮಾಲೀಕ ಸುಧಾಕರ್ ಶೆಟ್ಟಿ, ಮಾಜಿ ಶಾಸಕ ಕೆ. ಪ್ರಭಾಕರ ಬoಗೇರ ಪ್ರಕ್ರತಿ ಮದ್ದಡ್ಕ, ಜೀವ ವಿಮಾ ಪ್ರತಿನಿಧಿ ಕೆ, ರಮೇಶ್, ಪ್ರಥ್ವಿ ಗುರುವಾಯನಕೆರೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಸುಜಿತಾ ವಿ. ಬಂಗೇರ, ಅಧ್ಯಕ್ಷ ಜೇಷ್ಠ ಪಡಿವಾಳ್, ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ ಮೂಡೈಲು, ಉಪಾಧ್ಯಕ್ಷರಾದ ವಾಸುದೇವ ಪ್ರಭು ಕೆವುಡೇಲು. ಚಿದಾನoದ ಕಾಯೆರಡ್ಕ. ವಿಜಯ ಸಾಲ್ಯಾನ್ ಪಣಕಜೆ, ರುದೇಶ್ ಕುಮಾರ್ ಗಾಣದಕೊಟ್ಯ, ಅನೂಪ್ ಬoಗೇರ ಮದ್ದಡ್ಕ, ಕಾರ್ಯದರ್ಶಿ ಗೋಪಾಲ ಶೆಟ್ಟಿ ಕೋರ್ಯಾರು, ಕೋಶಾಧಿಕಾರಿ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಜೊತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಗಣೇಶ್ ಶೆಟ್ಟಿ ಅರ್ಕಜೆ, ವಿನೋದ್ ಶೆಣೈ ಮದ್ದಡ್ಕ, ಕೇಶವ ಪೂಜಾರಿ ಸುದೆಬೈಲು ಹಾಗೂ ಹಿರಿಯರು, ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜೇಷ್ಠ ಪಡಿವಾಳ್ ಪ್ರಾಥಮಿಕವಾಗಿ ಮಾತನಾಡಿ ಜೀರ್ಣೋದ್ಧಾರ ಕೆಲಸ ಕಾರ್ಯಗಳು ದಾನಿಗಳ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯಲಿದೆ ಎoದು ಹೇಳಿದರು. ರಾಜ್ ಪ್ರಕಾಶ್ ಪಡ್ಡೈಲು ಧನ್ಯವಾದ ನೀಡಿದರು.

Exit mobile version