Site icon Suddi Belthangady

ಮಚ್ಚಿನ: ತಾರೆಮಾರು ಸೇತುವೆಯ ಬಳಿ ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ಎಸೆಯುವ ಬಗ್ಗೆ ಸ್ಥಳೀಯರ ಅಕ್ರೋಶ

ಮಚ್ಚಿನ: ಗ್ರಾಮದ ತಾರೆಮಾರು ಸೇತುವೆಯ ಮೇಲೆ ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ಗಂಟು ಮೂಟೆ ಕಟ್ಟಿ ಎಸೆಯುವ ಬಗ್ಗೆ ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯರಾತ್ರಿ ಯಾರಿಲ್ಲದ ಸಮಯದಲ್ಲಿ ವಾಮಾಚಾರಕ್ಕೆ ಬಳಸಿದ ತೆಂಗಿನಕಾಯಿ, ಕುಂಬಳಕಾಯಿ ಇನ್ನಿತರ ಹಲವಾರು ವಸ್ತುಗಳು ನೀರಿಗೆ ಎಸೆಯುವುದು, ರಸ್ತೆಯಲ್ಲಿ ಸುರಿಯುವುದು, ತೆಂಗಿನಕಾಯಿ ಹೊಡೆಯುವುದು ನಿತ್ಯವೂ ನಡೆಯುತ್ತಿದ್ದು ಶಾಲಾ ಮಕ್ಕಳು ನಡೆದುಕೊಂಡು ಹೋಗುವ ಈ ದಾರಿಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಗ್ರಾಮ ಪಂಚಾಯತಿ ಈ ಬಗ್ಗೆ ತಕ್ಷಣ ಸೇತುವೆಯ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಸಿ ಈ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯವಾಗಿದೆ. ✍️ವರದಿ ಹರ್ಷ ಬಳ್ಳಮಂಜ

Exit mobile version