Site icon Suddi Belthangady

ಬಳಂಜ: ಹರೀಶ್ ರೈ ಅವರ ತೋಟದಲ್ಲಿ ಚಿಪ್ಪು ಹಂದಿ ಪ್ರತ್ಯಕ್ಷ

ಬೆಳ್ತಂಗಡಿ: ತಾಲೂಕು ಬಳಂಜ ಗ್ರಾಮದ ತಾರಿದೊಟ್ಟು ಮನೆಯ ಹರೀಶ್ ರೈ ಅವರ ತೋಟಕ್ಕೆ ನ.7ರಂದು ಬಂದ ಅಪರೂಪದ ಚಿಪ್ಪು ಹಂದಿಯನ್ನು ಸಾರ್ವಜನಿಕರ ಮಾಹಿತಿಯಂತೆ ರಕ್ಷಿಸಿ, ನಾನಂಜಿಮತಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿರುತ್ತದೆ. ವೇಣೂರು ವಲಯದ ಅರಣ್ಯ ಅಧಿಕಾರಿ ಭರತ್ ಯು.ಜಿ. ಅವರ ಸೂಚನೆಯಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಅಳದಂಗಡಿ ಶಾಖೆ ಹರಿಪ್ರಸಾದ್, ಬೀಡ್ ಫಾರೆಸ್ಟರ್ ಮಂಜುನಾಥ್ ಬಿ.ಎಸ್., ಸಿಬ್ಬಂದಿಗಳಾದ ವೆಂಕಪ್ಪ, ಫೂವಪ್ಪ, ವಸಂತ, ಸ್ಥಳೀಯರಾದ ಪ್ರವೀಣ, ವೃಷಭ ಹೆಗ್ಡೆ, ಯಶೋಧರ ಶೆಟ್ಟಿ, ನವೀನ, ಪದ್ಮನಾಭ ಕುಲಾಲ್, ನಂದ ಎಸ್. ರೈ., ಸಂಜೀವ ರೈ ಪಾಲ್ಗೊಂಡಿದ್ದರು.

Exit mobile version