Site icon Suddi Belthangady

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಸ್ಮಾರ್ಟ್ ಟಿ.ವಿ. ಕೊಡುಗೆ

ಬೆಳಾಲು: ಶ್ರೀ ಧ. ಮಂ ಅನುದಾನಿತ ಪ್ರೌಢ ಶಾಲೆಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಶಾಲೆಗೆ ಸಿಸಿಟಿವಿ ಪ್ರೊಜೆಕ್ಟ್ ಮಾಡಲು ಸ್ಮಾರ್ಟ್ ಟಿ.ವಿ. ಯನ್ನು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಸಂಘದ ಅಧ್ಯಕ್ಷ ಶಶಿಧರ್ ಓ., ಉಪಾಧ್ಯಕ್ಷ ಪದ್ಮನಾಭ ಬೆಳಾಲು ಅವರು ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯರಿಗೆ ಹಸ್ತಾಂತರಿಸಿದರು. ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಕುರ್ಕಿಲ್, ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version