ಗುರುವಾಯನಕೆರೆ: ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿರುವ ವಿದ್ವತ್ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಅನಿಶ್ ಮತ್ತು ತಂಡ ಜಾಹೀರಾತು ನೀಡುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ Working Model ಸ್ಪರ್ಧೆಯಲ್ಲಿ ಮಿಥುನ್ ಹಾಗೂ ತಂಡ ತೃತೀಯ ಸ್ಥಾನ Rebrand falling of buisness ಸ್ಪರ್ಧೆಯಲ್ಲಿ ರಿಶಾಂತ್ ಮತ್ತು ತಂಡ ತೃತೀಯ ಸ್ಥಾನವನ್ನು ನ.4ರಂದು ಶ್ರೀ ಮಹಾವೀರ ಕಾಲೇಜು ಮೂಡುಬಿದ್ರಿಯಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ (Comquest) ಸ್ಪರ್ಧೆಯಲ್ಲಿ ಪಡೆದುಕೊಂಡರು. ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ ನ. 5ರಂದು ನಡೆದ ಅಂತರ್ ಕಾಲೇಜು ಮಟ್ಟದ ಕಾಮರ್ಸ್ ಫೆಸ್ಟ್ ( Rize) ಸ್ಪರ್ಧೆಯಲ್ಲಿ ರಿಶಾಂತ್ ಮತ್ತು ತಂಡ Best mangement ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, Marketing ಸ್ಪರ್ಧೆಯಲ್ಲಿ ವಿನ್ಯಾಸ್ ಮತ್ತು ತಂಡವು ದ್ವಿತೀಯ ಸ್ಥಾನವನ್ನು ಗಳಿಸಿ ರನ್ನರ್ ಆಫ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಅಮೋಘ ಸಾಧನೆಯನ್ನು ವಿದ್ವತ್ ಕಾಲೇಜಿನ ಆಡಳಿತ ಮಂಡಳಿಯವರು, ಕಾಲೇಜು ಶೈಕ್ಷಣಿಕ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಅಂತರ್ ಕಾಲೇಜು ಮಟ್ಟದ ಸ್ಪರ್ಧೆ: ವಿದ್ವತ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

