ಮಿತ್ತಬಾಗಿಲು: ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನ ಮಿತ್ತಬಾಗಿಲಿನಲ್ಲಿ ಕಾರ್ತಿಕ ದೀಪೋತ್ಸವದ ಕಾರ್ಯಕ್ರಮಗಳು ನ.10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ ಅವರು ತಿಳಿಸಿದ್ದಾರೆ.
ರಾತ್ರಿ ಗಂಟೆ 7ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಲ್ಲಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8ಕ್ಕೆ ದೀಪ ಪ್ರಜ್ವಲನೆ, ರಾತ್ರಿ 8.15ಕ್ಕೆ ಮಹಾಪೂಜೆ ರಾತ್ರಿ 9ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಗಳು ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಅವರು ಅನ್ನದಾನದ ಸೇವಾಕರ್ತರಾಗಿದ್ದಾರೆ. ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವಂತೆ ಅವರು ವಿನಂತಿಸಿದ್ದಾರೆ.

