Site icon Suddi Belthangady

ಕಾಡಾನೆ ಓಡಾಟ: ಮಲವಂತಿಗೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ

ಮಲವಂತಿಗೆ: ಗ್ರಾಮದ ಅರಣ್ಯದ ಅಂಚಿನ ಜನವಸತಿ ಪ್ರದೇಶಗಳಲ್ಲಿ ಇತ್ತೀಚೆಗೆ ಆನೆಗಳ ಸಂಚಾರ ಕಂಡುಬಂದಿದ್ದು, ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಜಮೀನುಗಳಿಗೆ ಹೋಗುವಾಗ ಹಾಗೂ ರಾತ್ರಿವೇಳೆಯಲ್ಲಿ ಹೊರಸಂಚಾರ ಮಾಡುವಾಗ ಎಚ್ಚರದಿಂದ ಇರುವಂತೆ ಪ್ರಕಟಣೆ ಹೊರಡಿಸಲು ವನ್ಯಜೀವಿ ವಲಯಾರಣ್ಯಾಧಿಕಾರಿಗಳು ಕೋರಿರುತ್ತಾರೆ. ಆದ್ದರಿಂದ ಗ್ರಾಮಸ್ಥರು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ ಹಾಗೂ ಮುಂಜಾನೆ ವೇಳೆಗಳಲ್ಲಿ ಹೊರಸಂಚಾರ ಮಾಡದಂತೆ ಕೋರಲಾಗಿದೆ.

Exit mobile version