ಬೆಳ್ತಂಗಡಿ: ಮೆಸ್ಕಾಂ ಅದ್ಯಕ್ಷ ಕೆ. ಹರೀಶ್ ಕುಮಾರ್ ಅವರ ಮಂಗಳೂರು ನೂತನ ಕಚೇರಿ ಬಿಜೈ ಮೆಸ್ಕಾಂ ಕಾರ್ಪೊರೇಟ್ ಕಟ್ಟಡದಲ್ಲಿ ನ. 7ರಂದು ಉದ್ಘಾಟನೆಗೊಂಡಿತು. ಮೆಸ್ಕಾ ವ್ಯವಸ್ಥಾಪಕ ನಿರ್ದೇಶಕ ಅರ್. ಜಯ ಕುಮಾರ್ ಉದ್ಘಾಟಿಸಿದರು. ಮಂಗಳೂರು ಮೆಸ್ಕಾಂ ವಿಭಾಗದ ಅದ್ಯಕ್ಷ ಕೆ. ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣಾಥೇಶ್ವರ ಕ್ಷೇತ್ರದ ಅದ್ಯಕ್ಷ ಜಯರಾಜ್, ಕೋಶಾಧಿಕಾರಿ ಪದ್ಮರಾಜ್ ಅರ್., ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಶಾಸಕ ಜೆ.ಅರ್. ಲೋಬೋ, ನಮಿತಾ ಹರೀಶ್ ಕುಮಾರ್, ಮೆಸ್ಕಾಂ ತಾಮತ್ರಿಕ ನಿರ್ದೇಶಕ ಹರೀಶ್ ಕುಮಾರ್, ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮುರಳೀದರ ನಾಯ್ಕ್, ಮೆಸ್ಕಾಂ ಆರ್ಥಿಕ ಆರ್ಥಿಕ ಸಲಹೆಗಾರ ದೇವರಾಜ್, ಮೂಡಾ ಅದ್ಯಕ್ಷ ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೊ, ದಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಜರ, ರಾಜ್ಯ ಯೂತ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಬಿನಂದನ್ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಮೆಸ್ಕಾ ಸಾರ್ವಜನಿಕ ಸಂಪರ್ಕಾದಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ರ ಮಂಗಳೂರು ಕಚೇರಿ ಉದ್ಘಾಟನೆ

