ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ರಾಜ್ಯದಲ್ಲಿ ಒಂದು ಮಾದರಿ ಸಂಸ್ಥೆಯಾಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ದೂರದ ಊರುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಶಿಸ್ತು, ಭಕ್ತಿ, ಶೃದ್ಧೆ, ಛಲವನ್ನು ಒಳಗೊಂಡ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಭದ್ರಾ ಬುನಾದಿಯನ್ನು ಈ ಸಂಸ್ಥೆ ಹಾಕಿಕೊಟ್ಟಿದೆ ಇದರಿಂದಾಗಿ ಇಲ್ಲಿ ವಿದ್ಯಾರ್ಜನೆಗೈದ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯಶಸ್ವಿ ಜೀವನ ಕಾಣಲು ಸಾಧ್ಯವಾಗಿದೆ ಎಂದು ಬೆಂಗಳೂರಿನ ವಿಪ್ರೋ ಲಿಮಿಟೆಡ್ ನ ಮುಖ್ಯ ದತ್ತಾಂಶ ಮತ್ತು ವಿಶ್ಲೇಷಣಾಧಿಕಾರಿ ಮೆಲ್ವಿನ್ ಗೋವಿಯಸ್ ಅವರು ಹೇಳಿದರು.
ಅವರು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಲಾ ಸಿಂಚನ 2025 ವಿಜ್ಞಾನ ಮಾದರಿ ಮತ್ತು ಜನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರ ಪರಿಶ್ರಮ ಅನೇಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ .ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದ ಸವಿ ನೆನಪುಗಳನ್ನು ಹಂಚಿಕೊಂಡರು.
ಸೇಕ್ರೆಡ್ ಹಾರ್ಟ್ ಸಮೂಹ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಡಾ| ಸ್ಟ್ಯಾನಿ ಗೋವಿಯಸ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಮಂತ್ರಿಯವರ ಜಂಟಿ ಕಾರ್ಯದರ್ಶಿ ಅರುಣ್ ಪುರ್ಟಾಡೋ ನೂತನ ಪ್ರಾಜೆಕ್ಟ್ ನ್ನು ಉದ್ಘಾಟಿಸಿದರು. ಧರ್ಮಸ್ಥಳ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜ್ಯೋತಿ ಎಂ.ಆರ್., ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಹೆಲೆನ್ ಮೋನಿಕಾ ಲೋಬೊ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ವಂದಿಸಿದರು.
ಸಮಾರೋಪ ಸಮಾರಂಭ ಸೇಕ್ರೆಡ್ ಹಾರ್ಟ್ ಸಮೂಹ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಡಾ| ಸ್ಟ್ಯಾನಿ ಗೋವಿಯಸ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯು ಅಭಿವೃದ್ಧಿ ಹೊಂದುವಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಮಹತ್ತರವಾದುದು. ನಿಸ್ವಾರ್ಥ ಮನೋಭಾವದಿಂದ ಸಂಸ್ಥೆಯೊಂದರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿದರು. ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹಾಯಕ ಧರ್ಮಗುರು ಲ್ಯಾರಿ ಪಿಂಟೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರುಣ್ ಪುರ್ಟಾಡೋ, ಸಿ.ಆರ್.ಪಿ ಚೇತನ, ಸಂಘದ ಕಾರ್ಯದರ್ಶಿ ಅಶ್ವಿನಿ ಪಿ., ಜೊತೆ ಕಾರ್ಯದರ್ಶಿ ಲವೀನಾ ಜಾನೆಟ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಲಿತಾಂಶ: ವಿಜ್ಞಾನ ಮಾದರಿ ಸ್ಪರ್ಧೆ
ಪ್ರಥಮ: ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ
ದ್ವಿತೀಯ: ಸರಕಾರಿ ಪ್ರೌಢಶಾಲೆ ಬೆಳ್ತಂಗಡಿ
ತೃತೀಯ: ಸರಕಾರಿ ಪ್ರೌಢಶಾಲೆ ನೈನಾಡು
ಜನಪದ ನೃತ್ಯ ಸ್ಪರ್ಧೆ
ಪ್ರಥಮ : ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ
ದ್ವಿತೀಯ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು
ತೃತೀಯ: ಸೇಕ್ರೆಡ್ ಹಾರ್ಟ್ ಕನ್ನಡ ಮಾಧ್ಯಮ ಪ್ರೌಢಶಾಲೆ ಮಡಂತ್ಯಾರು
ಭಾಗವಹಿಸಿದ ಎಲ್ಲಾ ಪ್ರೌಢಶಾಲೆಗಳಿಗೆ ಪ್ರಮಾಣ ಪತ್ರ ಸ್ಮರಣಿಕೆ ನಗದು ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಕೊರೆಯ ಸ್ವಾಗತಿಸಿ, ಉಪನ್ಯಾಸಕರಾದ ವಿನ್ಸೆಂಟ್ ರೊಡ್ರಿಗಸ್ ಹಾಗೂ ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಶೆಟ್ಟಿ ವಂದಿಸಿದರು.

