ಬೆಳ್ತಂಗಡಿ: ಲಯನ್ಸ್ ಕ್ಲಬ್ ನಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ನೀಡಿದ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ ಸಭೆ ನ.6ರಂದು ಬೆಳ್ತಂಗಡಿಯಲ್ಲಿ ನಡೆಯಿತು.
ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ವಸಂತ ಕುಮಾರ್ ಶೆಟ್ಟಿಯವರು ಎಂ. ಜಿ. ಶೆಟ್ಟಿಯವರ ಕಾರ್ಯವೈಖರಿ, ದಿಟ್ಟತನ, ನಾಯಕತ್ವ ಗುಣ, ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ನೀಡಿದ ಬಗ್ಗೆ ನುಡಿ ನಮನದಲ್ಲಿ ವಿವರಿಸಿದರು.
ಬೆಳ್ತಂಗಡಿ ಲಯನ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಪ್ರಾಂತೀಯ ಅಧ್ಯಕ್ಷ ಜಗದೀಶಚಂದ್ರ ಡಿ. ಕೆ., ನಿಕಟಪೂರ್ವ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಸುಭಾಷಿಣಿ, ಲಿಯೋ ಅಧ್ಯಕ್ಷೆ ಡಾ. ಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ಪ್ರಾಂತೀಯ ಅಧ್ಯಕ್ಷರುಗಳಾದ ವೆಂಕಟೇಶ್ ಹೆಬ್ಬಾರ್, ರಾಜು ಶೆಟ್ಟಿ, ನಿತ್ಯಾನಂದ ನಾವರ, ಪ್ರಕಾಶ್ ಶೆಟ್ಟಿ ನೊಚ್ಚ, ಧರನೇಂದ್ರ ಕೆ. ಜೈನ್, ಸ್ಥಾಪಕ ಸದಸ್ಯ ವಿಶ್ವನಾಥ್ ಆರ್. ನಾಯಕ್, ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಗೌಡ, ಉಮೇಶ್ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ಮಾಜಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ದಾ ನುಡಿನಮನ ಸಭೆಯನ್ನು ನಿರ್ವಹಿಸಿದರು. ಎಂ. ಜಿ. ಶೆಟ್ಟಿಯವರ ಕುಟುಂಬ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ಮಾಜಿ ಅಧ್ಯಕ್ಷರಾದ ಸುಶೀಲ ಹೆಗ್ಡೆ, ಜಯಂತ್ ಶೆಟ್ಟಿ ಕುಂಟಿನಿ, ರವೀಂದ್ರ ಶೆಟ್ಟಿ ಬಳಂಜ ಲಯನ್ಸ್ ಸದಸ್ಯರುಗಳಾದ ಪ್ರತಿಭಾ ಹೆಬ್ಬಾರ್, ಪದ್ಮನಾಭ ಟಿ., ಕೃಷ್ಣ ಕೆ. ಆಚಾರ್, ಸುರೇಶ ಶೆಟ್ಟಿ ಲಾಯಿಲ, ವಿನ್ಸಿ ಟಿ. ಡಿಸೋಜ, ಮಂಜುನಾಥ್ ಜಿ., ತಂಗಚ್ಚನ್, ಸುಂದರಿ, ಗೋಪಾಲಕೃಷ್ಣ ಕಾಂಚೋಡು, ರಮೇಶ್, ತುಕಾರಾಮ್ ಬಿ., ರೀನಾ ಕೆ. ಜೆ., ಚಂದ್ರಶೇಖರ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ನಾಣ್ಯಪ್ಪ ನಾಯ್ಕ್ ಸಹಕರಿಸಿದರು.

